ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರಿಂ ಕೋರ್ಟ್ (Supreme Court) ಮೊದಲ ಬಾರಿಗೆ ತನ್ನ ಒಟ್ಟು 33 ನ್ಯಾಯಾಧೀಶರ ಪೈಕಿ 21 ಜನರ ಆಸ್ತಿಯನ್ನು (Assets) ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ (CJI Sanjiv Khanna) ಅವರು ಸೇವೆಯಿಂದ ನಿವೃತ್ತಿಯಾಗಲು ಒಂದು ವಾರ ಬಾಕಿ ಇರುವಾಗ ನ್ಯಾಯಾಧೀಶರ ಆಸ್ತಿಗಳ ವಿವರ ಪ್ರಕಟವಾಗಿದೆ. ನ್ಯಾ.ಖನ್ನಾ ಮೇ 13 ರಂದು ನಿವೃತ್ತರಾಗಲಿದ್ದಾರೆ.
ಆಸ್ತಿ ಮಾಹಿತಿಯ ಜೊತೆಗೆ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನೇಮಕಾತಿಗಳ ಸಂಪೂರ್ಣ ಪ್ರಕ್ರಿಯೆಯನ್ನು ಹೈಕೋರ್ಟ್ ಕೊಲಿಜಿಯಂಗೆ ನಿಯೋಜಿಸಲಾದ ಪಾತ್ರ, ರಾಜ್ಯ ಸರ್ಕಾರಗಳು, ಭಾರತ ಸರ್ಕಾರದಿಂದ ಪಡೆದ ಪಾತ್ರ ಮತ್ತು ಇನ್‌ಪುಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಪರಿಗಣನೆಯ ಪತ್ರವನ್ನು ಪ್ರಕಟಿಸಿಲಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಪಾಕಿಗೆ ಮತ್ತೆ ವಿಶ್ವಸಂಸ್ಥೆಯಲ್ಲಿ ಮುಖಭಂಗ
ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹಿಳಾ ನ್ಯಾಯಾಧೀಶರ ಪೈಕಿ ನ್ಯಾ.ಬೇಲಾ ಎಂ. ತ್ರಿವೇದಿ ತಮ್ಮ ಆಸ್ತಿಯನ್ನು ಪ್ರಕಟಿಸಿದ್ದಾರೆ ಆದರೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ಆಸ್ತಿ ಇನ್ನೂ ಅಪ್‌ಲೋಡ್ ಆಗಿಲ್ಲ. ಬಾರ್‌ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಪೀಠಕ್ಕೆ ಬಡ್ತಿ ಪಡೆದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಕೆ.ವಿ. ವಿಶ್ವನಾಥನ್ ಅವರ ಆಸ್ತಿಯನ್ನು ಪ್ರಕಟಿಸಲಾಗಿದೆ.
ನ್ಯಾಯಮೂರ್ತಿ ನಾಗರತ್ನ ಅವರಲ್ಲದೆ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ದೀಪಂಕರ್ ದತ್ತ, ಅಹ್ಸಾನುದ್ದೀನ್ ಅಮಾನುಲ್ಲಾ, ಮನೋಜ್ ಮಿಶ್ರಾ, ಅರವಿಂದ್ ಕುಮಾರ್, ಪಿ.ಕೆ. ಮಿಶ್ರಾ, ಎಸ್.ಸಿ. ಶರ್ಮಾ, ಪಿ.ಬಿ. ವರಾಲೆ, ಎನ್. ಕೋಟೀಶ್ವರ್ ಸಿಂಗ್, ಆರ್. ಮಹಾದೇವನ್, ಜೋಯ್ಮಲ್ಯ ಬಾಗ್ಚಿ ಅವರ ಆಸ್ತಿಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿಲ್ಲ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಯಶವಂತ್ ವರ್ಮಾ (Justice Yashwant Varma) ಅವರ ದೆಹಲಿ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆಯಾದ ಬಳಿಕ ನ್ಯಾಯಧೀಶರು ತಮ್ಮ ಆಸ್ತಿಯನ್ನು ಬಹಿರಂಗಪಡಿಸಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಇದನ್ನೂ ಓದಿ: ಜಡ್ಜ್ ನಿವಾಸದಲ್ಲಿ ಕಂತೆ ಕಂತೆ ನಗದು ಪತ್ತೆ ಕೇಸ್ – ಸಿಜೆಐ ಕೈ ಸೇರಿದ ತನಿಖಾ ವರದಿ
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸ್ಥಿರ ಠೇವಣಿ ಮತ್ತು ಬ್ಯಾಂಕ್ ಖಾತೆಗಳಲ್ಲಿ 55.75 ಲಕ್ಷ ರೂ. ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (ಪಿಪಿಎಫ್) 1.06 ಕೋಟಿ ರೂ. ಇದ್ದರೆ, ಮೇ 14 ರಂದು ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಬ್ಯಾಂಕ್ ಖಾತೆಗಳಲ್ಲಿ 19.63 ಲಕ್ಷ ರೂ. ಮತ್ತು ಪಿಪಿಎಫ್ ಖಾತೆಯಲ್ಲಿ 6.59 ಲಕ್ಷ ರೂ. ಇದೆ.