ಬೆಂಗಳೂರು: 2003ರಿಂದ ಏಳು ಜನ ಮುಖ್ಯಮಂತ್ರಿಗಳು ಬಂದ್ರೂ ಮಹದಾಯಿ ಯೋಜನೆಗೆ ಮುಕ್ತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಅಫಿಡೇವಿಟ್ ಆಧರಿಸಿ ಗುರುವಾರದಂದು ಸುಪ್ರೀಂಕೋರ್ಟ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಅಂತ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಾದ್ರೆ ಪರವಾನಿಗೆ ಮುಖ್ಯ. ಜೊತೆಗೆ ನ್ಯಾಯಾಧೀಕರಣದ ಅಂತಿಮ ಆದೇಶ ಬರೋವರೆಗೂ ಯೋಜನೆ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ಆದ್ರೆ 2003ರಲ್ಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ನೀಡಿತ್ತು. ಈ ವಿಷಯ ಆರ್‍ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ. ಹೀಗಿದ್ರೂ ಯಾಕೆ ಯಾರೊಬ್ಬರೂ ಪ್ರಶ್ನೆ ಮಾಡ್ತಿಲ್ಲ? ರಾಜ್ಯ ಬಿಜೆಪಿಯವರು ಯಾಕೆ ಸುಮ್ಮನಿದ್ದಾರೆ? ರಾಜ್ಯ ಸರ್ಕಾರವೂ ಯಾಕೆ ಸೈಲೆಂಟಾಗಿದೆ? 770 ದಿನಗಳಿಂದ ಮಹದಾಯಿಗಾಗಿ ಹೋರಾಟ ನಡೆತೀರೋದು ಯಾರಿಗೂ ಕಾಣಿಸ್ತಿಲ್ವಾ ಅನ್ನೋದು ಈಗಿರುವ ಯಕ್ಷ ಪ್ರಶ್ನೆ.
Advertisement
Advertisement
ಮಹದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಣ್ಣಿಗೆ ಮಣ್ಣೆರಚಿದ್ರೆ, ರಾಜ್ಯ ಸರ್ಕಾರದ ಸೋಮಾರಿತನವೂ ಇದ್ರಲ್ಲಿದೆ:
> 1999ರಲ್ಲಿ ಮಹದಾಯಿ ಯೋಜನೆಗೆ ನಿರ್ಧಾರ, 2000ರಲ್ಲಿ ಅಂದಾಜು ಪಟ್ಟಿ ತಯಾರಿ.
> 2002ರಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಹದಾಯಿ ಯೋಜನೆ ಪ್ರಸ್ತಾವನೆ ಸಲ್ಲಿಕೆ.
> 2003ರಲ್ಲಿ ಅರಣ್ಯ ಇಲಾಖೆ, ಪರಿಸರ ಇಲಾಖೆಯಿಂದ ಮಹದಾಯಿ ಯೋಜನೆಗೆ ಅನುಮತಿ ಸಿಕ್ತು.
> ಆಗಿನ ಕೇಂದ್ರ ಪರಿಸರ ಸಚಿವ ಬಾಲು ಅನುಮತಿ ಕೊಟ್ಟಿದ್ರು. ಆಗ ಸಿಎಂ ಆಗಿದ್ದು ಎಸ್.ಎಂ.ಕೃಷ್ಣ.
> 7.56 ಟಿಎಂಸಿ ನೀರಿನ ಬಳಕೆಯ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿತ್ತು.
> ಆದ್ರೆ ಯೋಜನೆ ವಿರೋಧಿಸಿ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
> ಆಗ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುಮತಿನೇ ಕೊಟ್ಟಿಲ್ಲ ಎಂದು ಸುಪ್ರೀಂಕೋರ್ಟ್‍ಗೆ ಸುಳ್ಳು ಅಫಿಡೆವಿಟ್ ಸಲ್ಲಿಸಿತ್ತು.
> ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಾಧೀಕರಣದಲ್ಲೇ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿತ್ತು.
> ಆದ್ರೆ ಪ್ರಶ್ನೆ ಇರೋದು ರಾಜ್ಯ ಸರ್ಕಾರಕ್ಕೆ 2003ರಲ್ಲಿ ಅನುಮತಿ ಸಿಕ್ಕಿದ್ದು ಗೊತ್ತಾಗಲಿಲ್ಲವಾ ಅನ್ನೋದು.
> ಈಗ ರಾಜ್ಯ ಸರ್ಕಾರದ ಸೋಮಾರಿತನದಿಂದ ನ್ಯಾಯಾಧೀಕರಣದ ಮುಂದೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.