ನವದೆಹಲಿ: ಯಮುನಾ ಪ್ರವಾಹ ಪ್ರದೇಶಕ್ಕೆ ಸಮೀಪದಲ್ಲಿರುವ ಗೀತಾ ಕಾಲೋನಿಯಲ್ಲಿರುವ ಪ್ರಚೀನ ಶಿವ ಮಂದಿರವನ್ನು (Pracheen Shiv Mandir) ಕೆಡವಲು ದೆಹಲಿ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ.
ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ರಜಾಕಾಲದ ಪೀಠವು ದೆಹಲಿ ಹೈಕೋರ್ಟ್ ಆದೇಶಕ್ಕೆ ಮಧ್ಯಪ್ರವೇಶಿಸಲು ನಿರಾಕರಿಸಿತು. ಇದನ್ನೂ ಓದಿ: ದುರಹಂಕಾರಿಗಳಾಗಿ ಬದಲಾಗಿದ್ದಕ್ಕೆ ರಾಮನೇ 241 ಸ್ಥಾನಕ್ಕೆ ನಿಲ್ಲಿಸಿದ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್ ಮುಖಂಡ ವಾಗ್ದಾಳಿ
ಪ್ರಾಚೀನ ದೇವಾಲಯದ ಪುರಾವೆ ಎಲ್ಲಿಂದ ಪ್ರಾರಂಭಿಸಬೇಕು? ಪ್ರಾಚೀನ ದೇವಾಲಯಗಳನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆಯೇ ಹೊರತು ಸಿಮೆಂಟ್ ಮತ್ತು ಬಣ್ಣದಿಂದಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಯಮುನಾ ನದಿಪಾತ್ರದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ದೇವಾಲಯವನ್ನು ಕೆಡವುವ ಸಂಬಂಧದ ಅರ್ಜಿಯಲ್ಲಿ ದೇವರನ್ನು ಕಕ್ಷಿದಾರರನ್ನಾಗಿ ಮಾಡಲು ನಿರಾಕರಿಸಿದ್ದ ಹೈಕೋರ್ಟ್, ಶಿವನಿಗೆ ಯಾರ ರಕ್ಷಣೆಯ ಅಗತ್ಯವಿಲ್ಲ ಎಂದು ಮೇ 29 ರಂದು ತಿಳಿಸಿತ್ತು. ಇದನ್ನೂ ಓದಿ: ಕೋಲ್ಕತ್ತಾ ಮಾಲ್‌ನಲ್ಲಿ ಅಗ್ನಿ ಅವಘಡ – ಹಲವು ಮಂದಿ ಸಿಲುಕಿರುವ ಶಂಕೆ
ಅರ್ಜಿದಾರರಾದ ಪ್ರಚೀನ್ ಶಿವ ಮಂದಿರ ಅವಮ್ ಅಖಾಡ ಸಮಿತಿಯು, ದೇವಾಲಯವು ಆಧ್ಯಾತ್ಮಿಕ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಸುಮಾರು 300 ರಿಂದ 400 ಭಕ್ತರು ಪ್ರತಿದಿನ ಬರುತ್ತಾರೆ. ದೇವಸ್ಥಾನದ ಆಸ್ತಿಗಳ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜವಾಬ್ದಾರಿಯುತ ನಿರ್ವಹಣೆಗಾಗಿ 2018 ರಲ್ಲಿ ನೋಂದಾಯಿಸಲಾಗಿದೆ ಎಂದು ಪ್ರತಿಪಾದಿಸಿತ್ತು.
ವಿವಾದಿತ ಭೂಮಿಯನ್ನು ಬಳಸಲು ಯಾವುದೇ ಸ್ಥಾಪಿತ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ. ನಗರಾಭಿವೃದ್ಧಿ ಸಚಿವಾಲಯವು ಅನುಮೋದಿಸಿದ ವಲಯದ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಭೂಮಿ ಬರುತ್ತದೆ. ದೇವಾಲಯಕ್ಕೆ ಯಾವುದೇ ಐತಿಹಾಸಿಕ ಮಹತ್ವವಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.