ನವದೆಹಲಿ: ಆನ್‍ಲೈನ್ ಗ್ಯಾಂಬ್ಲಿಂಗ್ (Online Gambling) ಗೇಮ್‍ಗಳ(Game) ನಿಷೇಧಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆದೇಶ ರದ್ದು ಮಾಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿರುವ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್(Supreme Court) ಇಂದು ಆನ್‍ಲೈನ್ ಗೇಮಿಂಗ್ ಕಂಪನಿಗಳಿಗೆ ನೋಟಿಸ್(Notice) ಜಾರಿ ಮಾಡಿದೆ.
Advertisement
ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಬ್ದುಲ್ ನಜೀರ್(Abdul Nazir) ನೇತೃತ್ವದ ದ್ವಿ ಸದಸ್ಯ ಪೀಠ ಈ ನೋಟಿಸ್ ಜಾರಿ ಮಾಡಿದ್ದು, ರಾಜ್ಯದಲ್ಲಿ ಆನ್‍ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ನಿರ್ಧರಿಸಿದ್ದ ಕರ್ನಾಟಕ ಸರ್ಕಾರ (Karnataka Government) ಆನ್‍ಲೈನ್ ಗೇಮ್ ಬ್ಯಾನ್ ಮಾಡಿ ಈ ಹಿಂದೆ ಆದೇಶ ಹೊರಡಿಸಿತ್ತು. ಅಕ್ಟೋಬರ್ 10 ರಿಂದ ಡ್ರೀಮ್ ಇಲೆವೆನ್, ಪೇ ಟೀಂ ಫಸ್ಟ್, ಗೇಮ್‍ಜಿ ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ ಆ್ಯಪ್‍ಗಳನ್ನು (Fantasy Game App) ಸ್ಥಗಿತಗೊಳಿಸಿತ್ತು. ಸರ್ಕಾರದ ಈ ಕ್ರಮವನ್ನು ಗೇಮಿಂಗ್ ಕಂಪನಿಗಳು (Gaming Company) ಹೈಕೋರ್ಟ್‍ನಲ್ಲಿ ಪ್ರಶ್ನಿಸಿದ್ದವು. ಇದನ್ನೂ ಓದಿ: ಪ್ರೇಮಿಗಳು ಓಡಿ ಹೋಗಿದ್ದಕ್ಕೆ ಪೋಷಕರ ಮೇಲೆ ಹಲ್ಲೆ- ವೀಡಿಯೋ ಮಾಡಿ ಲವ್ವರ್ಸ್ ಮನವಿ
Advertisement
Advertisement
ಅರ್ಜಿ ವಿಚಾರಣೆ ನಡೆಸಿದ್ದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ದೀಕ್ಷಿತ್‍ರ (Krishna Dixit) ಪೀಠ ಆನ್‍ಲೈನ್ ಗೇಮ್‍ಗೆ ಗ್ರೀನ್ ಸಿಗ್ನಲ್ ನೀಡಿತ್ತು. ಹೈಕೋರ್ಟ್ (High Court) ಆದೇಶವನ್ನು ಪ್ರಶ್ನೆ ಮಾಡಿ ಈಗ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇಂದು ವಿಚಾರಣೆ ನಡೆಸಿದ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ದೇಣಿಗೆಯಾಗಿ 2,000 ರೂ. ಕೊಡದ ತರಕಾರಿ ವ್ಯಾಪಾರಿಗೆ ಬೆದರಿಕೆ