ಆಂತರಿಕ ತನಿಖಾ ಸಮಿತಿ ವರದಿ ಅಸಿಂಧುಗೊಳಿಸುವಂತೆ ನ್ಯಾ.ವರ್ಮಾ ಅರ್ಜಿ – ವಿಶೇಷ ಪೀಠ ರಚಿಸುವ ಭರವಸೆ ನೀಡಿದ ಸಿಜೆಐ

Public TV
1 Min Read
supreme Court 1

ನವದೆಹಲಿ: ನಗದು ಪತ್ತೆ ಪ್ರಕರಣದಲ್ಲಿ ದುಷ್ಕೃತ್ಯ ಎಸಗಿದ ಆರೋಪದಲ್ಲಿ ತಮ್ಮನ್ನು ತಪ್ಪಿತಸ್ಥರೆಂದು ಘೋಷಿಸಿದ ಆಂತರಿಕ ತನಿಖಾ ಸಮಿತಿಯ ವರದಿಯನ್ನು ಅಸಿಂಧುಗೊಳಿಸುವಂತೆ ಕೋರಿ ನ್ಯಾಯಮೂರ್ತಿ ಯಶವಂತ್ ವರ್ಮಾ (Justice Yashwant Varma) ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ವಿಶೇಷ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ.

ಮೇ 8ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ತಮ್ಮ ವಿರುದ್ಧ ದೋಷಾರೋಪಣೆಯನ್ನು ಪ್ರಾರಂಭಿಸುವಂತೆ ಸಂಸತ್ತನ್ನು ಒತ್ತಾಯಿಸಿ ನೀಡಿದ್ದ ಶಿಫಾರಸನ್ನು ರದ್ದುಗೊಳಿಸುವಂತೆಯೂ ನ್ಯಾಯಮೂರ್ತಿ ವರ್ಮಾ ಕೋರಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 15 ಕುಟುಂಬಗಳು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ

Delhi Judge House Fire

ಪ್ರಕರಣವನ್ನು ಇಂದು ಸಿಜೆಐ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ನ್ಯಾಯಮೂರ್ತಿ ಯಶವಂತ ವರ್ಮಾ ಪರ ಹಿರಿಯ ಕಪಿಲ್ ಸಿಬಲ್ ವಾದ ಮಂಡಿಸಿದರು. ಇದು ನ್ಯಾ. ವರ್ಮಾ ಅವರ ಪದಚ್ಯುತಿಗೆ ಸಂಬಂಧಿಸಿದ ಪ್ರಕರಣ, ನಾವು ಕೆಲವು ಸಾಂವಿಧಾನಿಕ ಸಮಸ್ಯೆಗಳನ್ನು ಎತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಅದನ್ನು ಪಟ್ಟಿ ಮಾಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಜಾತಿಗಣತಿಗೆ ದಿನಾಂಕ ಫಿಕ್ಸ್‌ – ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ ನಡೆಸಲು ನಿರ್ಧಾರ

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ ಬಿ.ಆರ್ ಗವಾಯಿ, ಸಿಜೆಐ ಕೂಡ ಈ ಪ್ರಕ್ರಿಯೆಯ ಭಾಗವಾಗಿರುವುದರಿಂದ ಈ ವಿಷಯವನ್ನು ತಮ್ಮ ಮುಂದೆ ಪಟ್ಟಿ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ನಾವು ನಿರ್ಧಾರ ತೆಗೆದುಕೊಂಡು ಪೀಠವನ್ನು ರಚಿಸುತ್ತೇವೆ ಎಂದು ಸಿಜೆಐ ಸಿಬಲ್ ಅವರಿಗೆ ತಿಳಿಸಿದರು. ಇದನ್ನೂ ಓದಿ: ಅಮೆರಿಕ-ಜಪಾನ್ ನಡುವೆ ವ್ಯಾಪಾರ ಒಪ್ಪಂದ; ಟ್ರಂಪ್‌ ಘೋಷಣೆ

Share This Article