ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿನ ಗಾಳಿಯ ಗುಣಮಟ್ಟ ಅಪಾಯಕಾರಿ ಮಟ್ಟ ತಲುಪಿದ ಹಿನ್ನೆಲೆ ಈ ವಿಷಯವು ಸುಪ್ರೀಂ ಕೋರ್ಟ್ (Supreme Court) ಗೆ ತಲುಪಿದ್ದು, ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಪೀಠವು ನವೆಂಬರ್ 10 ರಂದು ವಿಚಾರಣೆಗೆ ಪಟ್ಟಿಮಾಡಿದೆ.
Advertisement
ಈ ಬಗ್ಗೆ ಇಂದು ಕೋರ್ಟ್ ಗಮನಕ್ಕೆ ತಂದ ವಕೀಲರು, ಕಳೆದ ಕೆಲವು ವರ್ಷಗಳಲ್ಲಿ ಎಕ್ಯೂಐ ಮಟ್ಟಗಳು 500 ಸಮಿಪಿಸಿದೆ. ಫಿಟ್ ಇರುವ ಜನರು ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪಂಜಾಬ್ (Punjab) ನಲ್ಲಿ 22 ಪ್ರತಿಶತದಷ್ಟು ಹುಲ್ಲು ಸುಡುವಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ. ಇದು ಜನರ ಬದುಕುವ ಹಕ್ಕನ್ನು ಒಳಗೊಂಡಿರುವುದರಿಂದ ಇಂದು ಅಥವಾ ನಾಳೆ ಅದನ್ನು ಆಲಿಸುವಂತೆ ನಾವು ಸುಪ್ರೀಂ ಕೋರ್ಟ್‍ಗೆ ವಿನಂತಿಸುತ್ತೇವೆ ಎಂದರು. ಇದನ್ನೂ ಓದಿ: ಗುಜರಾತ್ ಚುನಾವಣೆ – ಇಂದು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ
Advertisement
Advertisement
ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಕಳೆದ ಕೆಲವು ದಿನಗಳಿಂದ ‘ತೀವ್ರ’ ವಿಭಾಗದಲ್ಲಿದೆ. ಹುಲ್ಲು ಸುಡುವ ಪ್ರದೇಶಗಳಿಂದ ದೆಹಲಿಯ ಕಡೆಗೆ ಬೀಸುವ ಬಲವಾದ ಗಾಳಿಯಿಂದಾಗಿ (700-1000 ಮೀ) ಗುಣಮಟ್ಟವು ಗಮನಾರ್ಹವಾಗಿ ಹದಗೆಟ್ಟಿದೆ ಎಂದು ಡೇಟಾ ತೋರಿಸಿದೆ. ಈ ಹಿನ್ನೆಲೆ BS-VI ಕಂಪ್ಲೈಂಟ್ ಇಲ್ಲದ ಡೀಸೆಲ್ ನಾಲ್ಕು-ಚಕ್ರಗಳ ವಾಹನಗಳ ಬಳಕೆಯನ್ನು ಮತ್ತು ಟ್ರಕ್‍ಗಳ ಪ್ರವೇಶವನ್ನು ನಿಷೇಧಿಸಿದೆ.
Advertisement
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ (Air Pollution) ಹೆಚ್ಚುತ್ತಿರುವ ಹಿನ್ನೆಲೆ ಪ್ರಾಥಮಿಕ ಶಾಲೆಗಳನ್ನು ಬಂದ್ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ. 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಹೊರಾಂಗಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆಡಿ ಒನ್ ವ್ಯವಸ್ಥೆ ಮತ್ತೆ ಜಾರಿ ಮಾಡುವ ಬಗ್ಗೆ ಚಿಂತನೆ ನಡೆದಿದೆ.