ನವದೆಹಲಿ: ಉತ್ತರಪ್ರದೇಶ ಸರ್ಕಾರ ಬುಲ್ಡೋಜರ್‌ನಿಂದ ಮನೆಗಳನ್ನು ಧ್ವಂಸಗೊಳಿಸಿರುವ ಕಾರ್ಯಾಚರಣೆಗಳ ವಿರುದ್ಧ ಮುಸ್ಲಿಂ ಸಂಘಟನೆ ಜಮಿಯತ್ ಉಲಮಾ ಐ ಹಿಂದ್ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಯೋಗಿ ಸರ್ಕಾರವು ಪ್ರವಾದಿ ಮೊಹಮ್ಮದ್ ಅವರ ನಿಂದನೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಗಲಭೆ ನಡೆಸಿದವರಿಗೆ ಸೇರಿದ ಮನೆಗಳನ್ನು ಧ್ವಂಸಗೊಳಿಸಿತ್ತು. ಇದನ್ನು ಕೆಲ ಮುಸ್ಲಿಂ ಸಂಘಟನೆಗಳು ಹಾಗೂ ಮೂವರು ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಾಧೀಶರು ವಿರೋಧಿಸಿದ್ದರು. ಅಷ್ಟೇ ಅಲ್ಲದೇ ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
Advertisement
Advertisement
ಅರ್ಜಿಯಲ್ಲಿ ಇನ್ನು ಮಂದೆ ರಾಜ್ಯದಲ್ಲಿ ಕಾನೂನಾತ್ಮಕ ವಿಧಾನಗಳನ್ನು ಅನುಸರಿಸದೇ ಅಕ್ರಮ ಮನೆಗಳನ್ನು ಧ್ವಂಸ ಮಾಡದಂತೆ ನೋಡಿಕೊಳ್ಳಲು ಯೋಗಿ ನೇತೃತ್ವದ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜೂ. 13ರಂದು ಕೋರಿತ್ತು. ಈ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ದೇಶದಲ್ಲಿ 2023ರ ಮಾರ್ಚ್ ವೇಳೆಗೆ ಪೂರ್ಣ ಪ್ರಮಾಣದ 5G ಸೇವೆ: ಕೇಂದ್ರ ಸಚಿವ
Advertisement
Advertisement
ಈ ಹಿಂದೆ ಈ ಸಂಘಟನೆ ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿನ ಕಟ್ಟಡಗಳನ್ನು ನೆಲಸಮಗೊಳಿಸುವ ವಿಷಯದ ಕುರಿತು ಸಂಘಟನೆಯು ಮನವಿ ಸಲ್ಲಿಸಿತ್ತು. ಅಷ್ಟೇ ಅಲ್ಲದೇ ಈಗಾಗಲೇ ಈ ವಿಷಯದ ಕುರಿತು ಹೊಸ ಅರ್ಜಿಗಳು ಬಂದಿದ್ದು, ಕಳೆದ ವಿಚಾರಣೆಯ ನಂತರ ಕೆಲವು ಹೊಸ ಬೆಳವಣಿಗೆಗಳು ನಡೆದಿದೆ. ಈ ಕುರಿತು ನ್ಯಾಯಾಲಯ ಗಮನಹರಿಸಬೇಕು ಎಂದು ತಿಳಿಸಿವೆ. ಇದನ್ನೂ ಓದಿ: ಕೊಳವೆ ಬಾವಿ ತೋಡಿಸಿಕೊಡಿ ಅಂತಾ ಮತಪೆಟ್ಟಿಗೆಗೆ ಪತ್ರ ಹಾಕಿರುವ ಯುವಕ!