ಬಿಲ್ಕಿಸ್ ಬಾನೋ ಕೇಸ್ – ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಒಪ್ಪಿಗೆ

Public TV
1 Min Read
Court

ನವದೆಹಲಿ: ಗುಜರಾತ್ ಗಲಭೆ (Gujarat riots) ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬಾನೋ (Bilkis Bano) ಪ್ರಕರಣದ 11 ಅಪರಾಧಿಗಳ ಅವಧಿಗೂ ಮುನ್ನವೇ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಸುಪ್ರೀಂ ಕೋರ್ಟ್ (Supreme Court) ಪುರಸ್ಕರಿಸಿದೆ. ವಿಚಾರಣೆಗೆ ಹೊಸ ಪೀಠ ರಚಿಸಲು ಅನುಮತಿ ಸೂಚಿಸಿದೆ.

SUPREME COURT

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ (CJI DY Chandrachud), ನ್ಯಾಯಮೂರ್ತಿ ಪಿ.ಎಸ್ ನರಸಿಂಹ ಹಾಗೂ ಜೆ.ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಬಿಲ್ಕಿಸ್ ಬಾನೋ ಅವರ ವಕೀಲೆ ಶೋಭಾ ಗುಪ್ತ ಅವರಿಗೆ ಪೀಠವೊಂದನ್ನು ರಚಿಸುವ ಭರವಸೆ ನೀಡಿದೆ. ಇದನ್ನೂ ಓದಿ: ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ-ನಂಜೇಗೌಡನಂತೆ ಕತ್ತಿ ಹಿಡಿದು ಹೋರಾಡ್ತಿದ್ದೆ : ಸಿ.ಟಿ.ರವಿ

2022ರ ಆಗಸ್ಟ್ 15ರಂದು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ನಲ್ಲಿ ಬಿಲ್ಕಿಸ್ ಬಾನೋ ಅರ್ಜಿ ಸಲ್ಲಿಸಿದ್ದರು.

2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರು ಗರ್ಭಿಣಿಯಾಗಿದ್ದಾಗ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಅವರ ಮೂರು ವರ್ಷದ ಮಗಳು ಸೇರಿದಂತೆ ಅವರ ಕುಟುಂಬದವರನ್ನು ಕೊಲೆ ಮಾಡಲಾಗಿತ್ತು. ಒಟ್ಟು 11 ಜನರ ವಿರುದ್ಧ ಆರೋಪ ಸಾಬೀತಾಗಿ 2008 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಇದನ್ನೂ ಓದಿ: ಚುನಾವಣೆಗೆ ಮುನ್ನ ಭರ್ಜರಿ ಕಾರ್ಯಾಚರಣೆ – ಚೆಕ್‌ಪೋಸ್ಟ್‌ಗಳಲ್ಲಿ 15 ಲಕ್ಷ, ತಂಬಾಕು ಸೀಜ್

Share This Article
Leave a Comment

Leave a Reply

Your email address will not be published. Required fields are marked *