ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನವೇ ಆಯೋಧ್ಯೆ ಭೂ ವಿವಾದ ತೀರ್ಪು ಪ್ರಕಟವಾಗುವುದು ಅನುಮಾನವಾಗಿದೆ. 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ನಮಗೆ ನಮ್ಮದೇ ಆದ ಆಧ್ಯತೆಗಳಿವೆ ಎಂದು ಎಂದು ತಿಳಿಸಿರುವ ಪೀಠ ಜನವರಿ, ಫೆಬ್ರವರಿ ಅಥವಾ ಮೇನಲ್ಲೂ ವಿಚಾರಣೆ ನಡೆಸಬಹುದಾಗಿದ್ದು, ಈ ವೇಳೆಯೇ ಅಯೋಧ್ಯೆ ಬಗ್ಗೆ ಪ್ರತಿನಿತ್ಯ ವಿಚಾರಣೆ ನಡೆಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನ ಅಂದೇ ತೆಗೆದುಕೊಳ್ಳಲಿದೆ.
Advertisement
Advertisement
ಮೇಲ್ಮನವಿ ಅರ್ಜಿಗಳ ಶೀಘ್ರ ವಿಚಾರಣೆ ಸಾಧ್ಯವಿಲ್ಲ. ಆಯೋಧ್ಯೆ ಪ್ರಕರಣ ಜನರ ಭಾವನೆಗೆ ಸಂಬಂಧಿಸಿದ್ದು, ಈ ಕುರಿತು ತ್ವರಿತ ನಿರ್ಣಯ ಕೈಗೊಳ್ಳುವುದು ಕಷ್ಟಸಾಧ್ಯ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
Advertisement
ಒಂದು ವೇಳೆ ರಾಮ ಮಂದಿರ ಪರವಾಗಿ ತೀರ್ಪು ಬಂದರೆ ಆಯೋಧ್ಯೆ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಕನಸು ಕಂಡಿದ್ದ ಬಿಜೆಪಿ ಸುಪ್ರೀಂನ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ. ಈ ಹಿಂದೆ ಲೋಕಸಭೆ ಚುನಾವಣೆಗೂ ಮೊದಲೇ ಆಯೋಧ್ಯೆ ತೀರ್ಪು ಪ್ರಕಟ ಮಾಡುವುದು ಬೇಡ ಎಂದು ಕಾಂಗ್ರೆಸ್ ಮುಖಂಡ, ವಕೀಲ ಕಪಿಲ್ ಸಿಬಲ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಈ ಹಿಂದೆ ಸುಪ್ರೀಂ ವಜಾಗೊಳಿಸಿತ್ತು.
Advertisement
ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನೇ ಪ್ರಸ್ತಾಪಿಸಿದ ಅರ್ಜಿದಾರರು ಆಯೋಧ್ಯ ಪ್ರಕರಣವನ್ನು ಪ್ರತಿದಿನ ವಿಚಾರಣೆ ಮಾಡುವಂತೆ ವಾದ ಮಂಡಿಸಿದ್ದರು. ಅಲ್ಲದೇ ಈ ಅರ್ಜಿಗಳು ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿಯಲ್ಲೇ ಸಲ್ಲಿಕೆಯಾಗಿತ್ತು. ಆದರೆ ನಿವೃತ್ತಿಯ ಅಂಚಿನಲ್ಲಿದ್ದ ಕಾರಣ ಅವರು ಈ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡಿರಲಿಲ್ಲ. ಹೀಗಾಗಿ ಈ ಅರ್ಜಿಯ ವಿಚಾರಣೆಯನ್ನು ರಂಜನ್ ಗೊಗಾಯ್ ತೆಗೆದುಕೊಂಡಿದ್ದರು.
ದೀರ್ಘ ರಜೆ: ದೀಪಾವಳಿ, ಕಿಸ್ಮಸ್, ಹೊಸ ವರ್ಷದ ರಜೆ ಇರುವ ಕಾರಣ ಇಂದಿನಿಂದ ಆರಂಭಗೊಂಡು 2019ರ ಜನವರಿ 1ರ ವರೆಗೆ ಒಟ್ಟು 27 ದಿನ ಮಾತ್ರ ಕೋರ್ಟ್ ಕಲಾಪ ನಡೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
I don't want to comment since it's the decision of Supreme Court. However, the adjournment of hearing doesn't send a good message: Deputy Chief Minister of Uttar Pradesh, Keshav Prasad Maurya, on SC adjourns matter till January 2019 to fix date of hearing in #Ayodhya title suit pic.twitter.com/Y1vKGL6Exy
— ANI UP/Uttarakhand (@ANINewsUP) October 29, 2018