ನವದೆಹಲಿ: ಮೊಬೈಲ್ ಟವರ್‍ನ ವಿದ್ಯುತ್ಕಾಂತೀಯ ವಿಕಿರಣದಿಂದ ನಾನು ಕ್ಯಾನ್ಸರ್‍ಗೆ ತುತ್ತಾಗಿದ್ದೇನೆ ಎಂದು 42 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಳಿಕ ಮೊಬೈಲ್ ಟವರ್ ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಇಂತಹದ್ದೊಂದು ಆದೇಶ ನೀಡಿದೆ ಎಂದು ವರದಿಯಾಗಿದೆ.
2002ರಲ್ಲಿ ತಮ್ಮ ಪಕ್ಕದ ಮನೆಯ ಛಾವಣಿಯ ಮೇಲೆ ಅಕ್ರಮವಾಗಿ ಅಳವಡಿಕೆ ಮಾಡಲಾದ ಮೊಬೈಲ್ ಟವರ್ ಬಂದ್ ಮಾಡುವಂತೆ ಕೋರಿ ಮಧ್ಯಪ್ರದೇಶದ ಗ್ವಾಲಿಯರ್‍ನ ದಾಲ್ ಬಜಾರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಚಂದ್ ತಿವಾರಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ 14 ವರ್ಷಗಳಿಂದ ಈ ಮೊಬೈಲ್ ಟವರ್‍ನ ಹಾನಿಕಾರಕ ವಿಕರಣಗಳಿಂದ ತೊಂದರೆ ಪಡುತ್ತಿದ್ದೇವೆ ಎಂದು ಹರೀಶ್ ಹೇಳಿದ್ದರು.
Advertisement
ದೀರ್ಘ ಕಾಲದಿಂದ ವಿಕರಣಕ್ಕೆ ಒಡ್ಡಿಕೊಂಡಿದ್ದರಿಂದ ಹಾಡ್ಕಿನ್ಸ್ ಲಿಮ್ಫೋಮಾ(ಕ್ಯಾನ್ಸರ್)ಗೆ ತುತ್ತಾಗಿದ್ದೇನೆ ಎಂದು ಹೇಳಿ ಸ್ಥಳೀಯ ವಕೀಲೆ ನಿವೇದಿತಾ ಶರ್ಮಾ ಅವರ ಸಹಾಯ ಪಡೆದು ಹರೀಶ್ ಅವರು ಅರ್ಜಿ ಸಲ್ಲಿಸಿದ್ದರು.
Advertisement
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜನ್ ಗೋಗಿ ಹಾಗೂ ನ್ಯಾ. ನವೀನ್ ಸಿನ್ಹಾ ನೇತೃತ್ವದ ಪೀಠ, 7 ದಿನಗಳ ಒಳಗಾಗಿ ಮೊಬೈಲ್ ಟವರ್ ಬಂದ್ ಮಾಡುವಂತೆ ಸೂಚಿಸಿದೆ.