ನವದೆಹಲಿ: ಚಾಮರಾಜನಗರದಲ್ಲಿ (Chamarajanagara) ವಿಷಪ್ರಾಶನದಿಂದ ಐದು ಹುಲಿಗಳ ಸಾವು ಪ್ರಕರಣ ಕುರಿತು ಪ್ರತಿಕ್ರಿಯಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಸೂಚಿಸಿದೆ. ಅಲ್ಲದೇ, ವನ್ಯಜೀವಿ ಅಭಯಾರಣ್ಯಗಳಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದೆ. ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಮಲೆ ಮಹದೇಶ್ವರ (ಎಂಎಂ) ಬೆಟ್ಟಗಳ ವನ್ಯಜೀವಿ ಅಭಯಾರಣ್ಯದಲ್ಲಿ ಕಳೆದ ತಿಂಗಳು ಒಂದು ಹುಲಿ ಮತ್ತು ನಾಲ್ಕು ಮರಿಗಳು (Tiger Deaths Cse ಸಾವನ್ನಪ್ಪಿದ್ದವು. ಅರಣ್ಯಾಧಿಕಾರಿಗಳು ಮತ್ತು ಅರಣ್ಯ ವೀಕ್ಷಕರ ಹುದ್ದೆಗಳಲ್ಲಿ 80% ಖಾಲಿ ಇವೆ ಎಂದು ನ್ಯಾಯಾಲಯವು ಬೇಸರ ವ್ಯಕ್ತಪಡಿಸಿದೆ. ಇದನ್ನೂ ಓದಿ: 5 ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಬಂಡೀಪುರದಲ್ಲಿ ಮತ್ತೊಂದು ಹುಲಿ ಸಾವು
ಎಲ್ಲಾ ರಾಜ್ಯಗಳನ್ನು ಸೇರಿಸಿಕೊಂಡು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹುದ್ದೆ ಖಾಲಿ ಇದೆ. ಕರ್ನಾಟಕ ಸರ್ಕಾರದೊಂದಿಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (ಎಂಒಇಎಫ್ಸಿಸಿ) ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸಿಜೆಐ ಭೂಷಣ್ ಆರ್ ಗವಾಯಿ ನೇತೃತ್ವದ ಪೀಠ ಸೂಚಿಸಿದೆ.
ವನ್ಯಜೀವಿ ಮತ್ತು ಪರಿಸರ ಸಮಸ್ಯೆಗಳ ಕುರಿತು ನ್ಯಾಯಾಲಯಕ್ಕೆ ಸಹಾಯ ಮಾಡುವ ತಜ್ಞರ ಸಂಸ್ಥೆಯಾದ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ)ಯ ವರದಿಯನ್ನು ನ್ಯಾಯಾಲಯ ಪರಿಗಣಿಸುತ್ತಿತ್ತು. ಇದು ಒಂದೇ ಘಟನೆಯಲ್ಲಿ ವರದಿಯಾದ ಅತಿ ಹೆಚ್ಚು ಹುಲಿ ಸಾವುಗಳು ಎಂದು ಸಮಿತಿ ಹೇಳಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಗಂಡು ಹುಲಿ ಸಾವು – ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ರಚಿಸಿದ ವಿಶೇಷ ತನಿಖಾ ತಂಡದ (ಎಸ್ಐಟಿ) ಸಂಶೋಧನೆಗಳನ್ನು ಸಿಇಸಿ ಮಂಡಿಸಿತು. ಇದು ಹುಲಿಗಳ ಸಾವು ವಿಷಪ್ರಾಶನದಿಂದ ಉಂಟಾಗಿದೆ. ಹುಲಿಗಳು ತಿಂದ ದನದ ಮೃತದೇಹದ ಮೇಲೆ ಕೀಟನಾಶಕ ಸಿಂಪಡಿಸಿದ ಗ್ರಾಮಸ್ಥರದ್ದು ಉದ್ದೇಶಪೂರ್ವಕ ಕೃತ್ಯ ಎಂದು ತೀರ್ಮಾನಿಸಿತು.
ಜೂನ್ 26 ರಂದು ನಡೆದ ಹುಲಿಗಳ ಸಾವಿನ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಎಂಎಂ ಹಿಲ್ಸ್ನಲ್ಲಿ ಪ್ರತೀಕಾರದ ವಿಷಪ್ರಾಶನದ ಮೊದಲ ಘಟನೆ ಇದಾಗಿದೆ. ಆದಾಗ್ಯೂ 2019–2020 ರಲ್ಲಿ ಬಂಡೀಪುರ ಹುಲಿ ಅಭಯಾರಣ್ಯದಂತಹ ಹತ್ತಿರದ ಪ್ರದೇಶಗಳಲ್ಲಿ ಇದೇ ರೀತಿಯ ಪ್ರಕರಣಗಳು ಸಂಭವಿಸಿವೆ. ಈ ಸಾವುಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.