ನವದೆಹಲಿ: ಸಲಿಂಗ ವಿವಾಹವನ್ನು (Same Sex Marriage) ಅಂಗೀಕರಿಸುವಂತೆ ಸಲಿಂಗಕಾಮಿ ದಂಪತಿಗಳು (Gay Couples) ಸಲ್ಲಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಕೇಂದ್ರ ಸರ್ಕಾರ ಮತ್ತು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ನೋಟಿಸ್ ಜಾರಿ ಮಾಡಿದೆ.
Advertisement
ಸಿಜೆಐ (CJI) ಡಿ. ವೈ ಚಂದ್ರಚೂಡ್ ಮತ್ತು ನ್ಯಾ. ಹಿಮಾಕೊಹ್ಲಿ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ವಿಚಾರಣೆ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ ಕೋರ್ಟ್ ನಾಲ್ಕು ವಾರಗಳಿಗೆ ವಿಚಾರಣೆಯನ್ನು ಮುಂದೂಡಿತು. ಇದನ್ನೂ ಓದಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹವನ್ನು ಅಂಗೀಕರಿಸಿ: ಸುಪ್ರೀಂಕೋರ್ಟ್‍ಗೆ ಅರ್ಜಿ
Advertisement
Advertisement
ಹೈದರಾಬಾದ್‍ನಲ್ಲಿ ಮೂಲದ ಇಬ್ಬರು ಸಲಿಂಗಕಾಮಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡ್ಯಾಂಗ್ ಈ ಅರ್ಜಿ ಸಲ್ಲಿಸಿದ್ದು, ಒಬ್ಬರ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು LGBTQ+ ನಾಗರಿಕರಿಗೂ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದರು. 10 ವರ್ಷದ ಹಿಂದೆ ಅಧಿಕೃತ ಮದುವೆ ನಡೆದಿದ್ದರೂ ಈವರೆಗೂ ಅವರು ವಿವಾಹಿತ ದಂಪತಿಗಳ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ದಂಪತಿಗಳು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಕೋರ್ಟ್ ಹೇಗೆ ರಕ್ಷಿಸುತ್ತದೆಯೋ ಅದರಂತೆ ಸಲಿಂಗ ವಿವಾಹವು ಈ ಸಾಂವಿಧಾನಿಕವಾಗಿ ಅಧಿಕೃತಗೊಳಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ
Advertisement
ಈ ಪ್ರಕರಣ ಸೆಕ್ಷನ್ 377 ಅನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ LGBTQ+ ವ್ಯಕ್ತಿಗಳು ಸಮಾನತೆ, ಘನತೆ ಮತ್ತು ಗೌಪ್ಯತೆಯ ಹಕ್ಕನ್ನು ಇತರ ಎಲ್ಲಾ ನಾಗರಿಕರಿಗೆ ಸಮಾನವಾಗಿ ಸಂವಿಧಾನವು ಖಾತರಿಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇವುಗಳ ಆಧರಿಸಿ ಕೋರ್ಟ್‍ಗೆ ಈಗ ಅರ್ಜಿ ಸಲ್ಲಿಸಲಾಗಿದೆ.