Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅತ್ಯಾಚಾರ ಅಪರಾಧದ ವ್ಯಾಪ್ತಿಗೆ `ಶವ ಸಂಭೋಗ’ – ಕರ್ನಾಟಕ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಅತ್ಯಾಚಾರ ಅಪರಾಧದ ವ್ಯಾಪ್ತಿಗೆ `ಶವ ಸಂಭೋಗ’ – ಕರ್ನಾಟಕ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ

Karnataka

ಅತ್ಯಾಚಾರ ಅಪರಾಧದ ವ್ಯಾಪ್ತಿಗೆ `ಶವ ಸಂಭೋಗ’ – ಕರ್ನಾಟಕ ಸರ್ಕಾರದ ಮನವಿ ತಿರಸ್ಕರಿಸಿದ ಸುಪ್ರೀಂ

Public TV
Last updated: February 5, 2025 5:24 pm
Public TV
Share
3 Min Read
supreme Court 1
SHARE

ನವದೆಹಲಿ: ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಶವ ಸಂಭೋಗ ಎಂಬುದು ಅತ್ಯಾಚಾರ ಅಪರಾಧವಾಗದು ಎಂದು ಕರ್ನಾಟಕ ಹೈಕೋರ್ಟ್
(High Court) 2023ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ (Supreme Court)  ತಿರಸ್ಕರಿಸಿದೆ.

ನ್ಯಾ.ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು, ಸಂಸತ್ತು ಈ ವಿಚಾರವಾಗಿ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದರೆ ಕಾಯಿದೆಯಲ್ಲಿ ಬದಲಾವಣೆ ಮಾಡಬಹುದು. ಈ ಸಂಬಂಧ ಸರ್ಕಾರ ಸಂಸತ್ತಿಗೆ ಪತ್ರ ಬರೆಯಬಹುದು ಎಂದು ತಿಳಿಸಿದೆ.

ಪ್ರಕರಣದ ಆರೋಪಿ 21 ವರ್ಷದ ಮಹಿಳೆಯನ್ನು ಕೊಲೆ ಮಾಡಿ ನಂತರ ಮೃತದೇಹದೊಂದಿಗೆ ಸಂಭೋಗ ನಡೆಸಿದ್ದ. ವಿಚಾರಣಾ ನ್ಯಾಯಾಲಯ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಮತ್ತು ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎರಡೂ ಕೃತ್ಯಗಳಿಗೆ ಶಿಕ್ಷೆ ವಿಧಿಸಿತ್ತು.ಇದನ್ನೂ ಓದಿ: ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಚಾಕು – ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

2023ರ ಮೇಯಲ್ಲಿ ತೀರ್ಪು ನೀಡಿದ ಹೈಕೋರ್ಟ್ ಶವ ಸಂಭೋಗ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ. ಅಲ್ಲದೆ ಅದು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಅಸ್ವಾಭಾವಿಕ ಲೈಂಗಿಕ ಕೃತ್ಯದ ವ್ಯಾಪ್ತಿಗೂ ಬರುವುದಿಲ್ಲ ಎಂದಿತ್ತು. ಐಪಿಸಿ ಸೆಕ್ಷನ್ 375 ಮತ್ತು 377ನ್ನು ಎಚ್ಚರಿಕೆಯಿಂದ ಓದಿದಾಗ, ಮೃತ ದೇಹವನ್ನು ಮನುಷ್ಯ ಅಥವಾ ವ್ಯಕ್ತಿ ಎಂದು ಕರೆಯಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದ್ದರಿಂz, 375 ಅಥವಾ 377ನೇ ಸೆಕ್ಷನ್‌ಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ಹೈಕೋರ್ಟ್ ವಿವರಿಸಿತ್ತು.

ಆದರೆ ಶವ ಸಂಭೋಗವನ್ನು ಅಪರಾಧ ಎಂದು ಪರಿಗಣಿಸುವುದಕ್ಕಾಗಿ ಐಪಿಸಿಯಲ್ಲಿ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಇದು ಸಕಾಲ. ಇಂತಹ ಕೃತ್ಯವನ್ನು ಅಪರಾಧೀಕರಿಸಲು ಐಪಿಸಿಯ ಸೆಕ್ಷನ್ 377 ಅನ್ನು ತಿದ್ದುಪಡಿ ಮಾಡಬೇಕು ಅಥವಾ ಪ್ರತ್ಯೇಕ ಸೆಕ್ಷನ್ ಜಾರಿಗೆ ತರಬೇಕು ಎಂತಲೂ ನ್ಯಾಯಾಲಯ ಹೇಳಿತ್ತು.

ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿತ್ತಾದರೂ ಮಹಿಳೆಯ ಮೃತ ದೇಹದ ಮೇಲೆ ಅತ್ಯಾಚಾರ ನಡೆದಿದ್ದ ಕಾರಣಕ್ಕೆ ಐಪಿಸಿ ಸೆಕ್ಷನ್ 375ರ ಅಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಲಾಗಿತ್ತು. ತೀರ್ಪು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

karnataka High Court

ಸರ್ಕಾರದ ಪರವಾಗಿ ಹಾಜರಾದ ವಕೀಲ ಅಮನ್ ಪನ್ವರ್, ಮೃತ ವ್ಯಕ್ತಿ ಲೈಂಗಿಕ ಕ್ರಿಯೆಗಳಿಗೆ ಒಪ್ಪಿಗೆ ನೀಡುವುದು ಸಾಧ್ಯವಿಲ್ಲದ ಕಾರಣ, ಮೃತದೇಹದ ಮೇಲಿನ ಅತ್ಯಾಚಾರವನ್ನು ಸೆಕ್ಷನ್ ವ್ಯಾಪ್ತಿಗೆ ಒಳಪಡುವಂತೆ ಅದನ್ನು ವ್ಯಾಖ್ಯಾನಿಸಬೇಕು ಎಂದು ವಾದಿಸಿದರು.

ಸೆಕ್ಷನ್ 375(ಸಿ)ನಲ್ಲಿ ಬಳಸಲಾದ `ದೇಹ’ ಎಂಬ ಪದವನ್ನು `ಮೃತ ದೇಹ’ ಎಂತಲೂ ಪರಿಗಣಿಸಬೇಕು. ಸೆಕ್ಷನ್ 375 ರ ಏಳನೇ ವಿವರಣೆಯು ಮಹಿಳೆಯು ಒಪ್ಪಿಗೆಯನ್ನು ತಿಳಿಸಲು ಸಾಧ್ಯವಾಗದಿದ್ದಾಗಲೂ ಸಹ ಅದನ್ನು ಅತ್ಯಾಚಾರವೆಂದು ಪರಿಗಣಿಸಬೇಕು ಎನ್ನುತ್ತದೆ. ಈ ವಿವರಣೆಯನ್ನು ಆಧರಿಸಿಯಾದರೂ ಮೃತ ದೇಹದ ಮೇಲಿನ ಅತ್ಯಾಚಾರವನ್ನು ಅಪರಾಧದ ವ್ಯಾಪ್ತಿಗೆ ತರಬೇಕು. ನ್ಯಾಯಾಲಯ ಸೆಕ್ಷನ್ 375ನ್ನು ಹೆಚ್ಚು ಆಳವಾಗಿ ಪರಿಗಣಿಸದೆ ಮೃತ ದೇಹದ ಮೇಲಿನ ಅತ್ಯಾಚಾರವನ್ನೂ ಒಳಗೊಳ್ಳುವಂತೆ ಉದಾರವಾಗಿ ಅರ್ಥೈಸಬೇಕು ಎಂದು ಪನ್ವರ್ ಹೇಳಿದರು. ಮೃತ ದೇಹಗಳಿಗೂ ಘನತೆ ಮತ್ತು ನ್ಯಾಯಪರತೆ ಅನ್ವಯಿಸಬೇಕು ಎಂದು ಪಂಡಿತ್ ಪರಮಾನಂದ ಕಟಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 1995ರಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ಅವರು ವಾದ ಮಂಡಿಸಿದರು.

ಶವ ಸಂಭೋಗವನ್ನು ಅತ್ಯಾಚಾರದ ವ್ಯಾಪ್ತಿಗೆ ತರುವುದಕ್ಕಾಗಿ ಪ್ರಭುತ್ವ ಮತ್ತು ಬ್ರೋಬೆಕ್ ನಡುವಣ ಪ್ರಕರಣದಲ್ಲಿ ಅಮೆರಿಕದ ಟೆನ್ನೆಸ್ಸೀ ಪ್ರಾಂತದ ಸುಪ್ರೀಂ ಕೋರ್ಟ್ ಸೇರಿದಂತೆ ಅಂತರರಾಷ್ಟ್ರೀಯ ನ್ಯಾಯಾಲಯಗಳು ದಂಡ ಸಂಹಿತೆಯ ಸೆಕ್ಷನ್‌ಗಳನ್ನು ವಿಸ್ತರಿಸಿವೆ ಎಂದು ಅವರು ಪ್ರಸ್ತಾಪಿಸಿದರು. ಆದರೂ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನ್ಯಾಯಾಲಯ ನಿರಾಕರಿಸಿತು.ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ತಾಳ್ಮೆ ಕಳೆದುಕೊಂಡಿದ್ದೇಕೆ..? – ಮಾಜಿ ಪ್ರಧಾನಿ ಚಂದ್ರಶೇಖರ್ ಪುತ್ರನಿಗೆ ಹೀಗೇಕೆ ಹೇಳಿದ್ರು?

TAGGED:high courtSupreme Courtಕರ್ನಾಟಕ ಸರ್ಕಾರನವದೆಹಲಿಸುಪ್ರೀಂ ಕೋರ್ಟ್ಹೈಕೋರ್ಟ್
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Samrat Choudhary Nitish Kumar
Latest

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

Public TV
By Public TV
4 minutes ago
Whitefield Mother Kills Daughter And Commits Suicide
Bengaluru City

17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

Public TV
By Public TV
5 minutes ago
Nitish Kumar Bihar
Latest

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ – ನಾಳೆ ಹೊಸ ಸಿಎಂ ಪ್ರಮಾಣವಚನ ಸಾಧ್ಯತೆ

Public TV
By Public TV
34 minutes ago
Vijayanagara Rain Papaya Crop Destroyed
Bellary

ವಿಜಯನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ – ಪಪ್ಪಾಯ ಬೆಳೆ ಸಂಪೂರ್ಣ ನಾಶ

Public TV
By Public TV
39 minutes ago
Sanju Samson 1
Cricket

ಒಡೆದ ಡಿಸ್‌ಪ್ಲೇನಲ್ಲೇ ಸೆಲ್ಫಿ ಕ್ಲಿಕ್ಕಿಸಿದ ಅಭಿಮಾನಿ – 40,000 ಮೌಲ್ಯದ ಫೋನನ್ನೇ ಗಿಫ್ಟ್‌ ಕೊಟ್ಟ ಸಂಜು

Public TV
By Public TV
45 minutes ago
G Parameshwar
Districts

ಸಂಪುಟ ಪುನಾರಚನೆ ಸುಳಿವು ಇದೆ: ಪರಮೇಶ್ವರ್

Public TV
By Public TV
55 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?