ನವದೆಹಲಿ: ಮುಂದೆ ನಡೆಯಲಿರುವ ಲೋಕಸಭೆ ಚುನಾವಣೆಯನ್ನು (Lok Sabha Election) ಬ್ಯಾಲೆಟ್ ಪೇಪರ್ ಮೂಲಕ ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನಿರ್ದೇಶನ ನೀಡುವಂತೆ ಕೋರಿ ಕಾಂಗ್ರೆಸ್ (Congress) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ (Suprme Court) ಶುಕ್ರವಾರ ವಜಾಗೊಳಿಸಿದೆ.
ವಿದ್ಯುನ್ಮಾನ ಮತಯಂತ್ರಗಳ (EVM) ಬಗ್ಗೆ ಕಳವಳ ವ್ಯಕ್ತಪಡಿಸಿ ಕಾಂಗ್ರೆಸ್‌ನ ಮಥುರಾ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಪೀಠದಲ್ಲಿ ನಡೆಯಿತು.
ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ 1,368 ಕೋಟಿ ನೀಡಿದ ಲಾಟರಿ ಕಿಂಗ್ ಪಿನ್ ಮಾರ್ಟಿನ್ ಯಾರು?
Advertisement
Advertisement
ನಾವು ಎಷ್ಟು ಅರ್ಜಿಗಳನ್ನು ಪರಿಗಣಿಸಬೇಕು? ನಾವು ಊಹೆಗಳ ಮೂಲಕ ಹೋಗಲು ಸಾಧ್ಯವಿಲ್ಲ. ಪ್ರತಿಯೊಂದು ವಿಧಾನವು ಅದರ ಪ್ಲಸ್ ಮತ್ತು ಮೈನಸ್ ಪಾಯಿಂಟ್‌ಗಳನ್ನು ಹೊಂದಿದೆ. ಹೀಗಾಗಿ ಈ ಅರ್ಜಿಯನ್ನು ನಾವು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ – ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ ಕವಿತಾ ಅರೆಸ್ಟ್
Advertisement
ಕಾಂಗ್ರೆಸ್ ಪರ ವಾದ ಮಂಡಿಸಿದ್ದ ನಂದಿನಿ ಶರ್ಮ, ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಸಬಹುದು. ಮತಯಂತ್ರ ಬಳಕೆಗೆ ಏನೇನೋ ಕಾರಣ ನೀಡುವುದು ಸಮಂಜಸವಲ್ಲ. ಇವಿಎಂನಿಂದ ಮತಗಳನ್ನು ತಿರುಚಬಹುದು. ಅಲ್ಲದೇ ಇವಿಎಂ ಮೇಲಿನ ಆಡಳಿತರೂಢ ಬಿಜೆಪಿಯ ಪ್ರೀತಿ ಮತ್ತು ಬೆಂಬಲ ನೋಡಿದರೆ ಅನುಮಾನಗಳು ದಟ್ಟವಾಗುತ್ತವೆ ಎಂದು ವಾದಿಸಿದ್ದರು. ಇದನ್ನೂ ಓದಿ: Hassan Lok Sabha 2024: ದೊಡ್ಡಗೌಡ್ರ ಭದ್ರಕೋಟೆ ಭೇದಿಸಲು ಕಾಂಗ್ರೆಸ್ ಕಸರತ್ತು!
Advertisement