ನವದೆಹಲಿ: ಬಿಹಾರ (Bihar) ಸರ್ಕಾರದಿಂದ ನಡೆಯುತ್ತಿರುವ ಜಾತಿ ಸಮೀಕ್ಷೆಗೆ (Caste Survey) ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಜಾತಿ ಸಮೀಕ್ಷೆಯ ಸಿಂಧುತ್ವವನ್ನು ಎತ್ತಿಹಿಡಿಯುವ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆ.14 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಜಾತಿ ಸಮೀಕ್ಷೆಗೆ ವಿರಾಮ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಖನ್ನಾ, ಸಮೀಕ್ಷೆ ಸ್ವಲ್ಪ ಕಾಲ ಮುಂದುವರಿಯಲಿ. ಸಮೀಕ್ಷೆ 80% ರಷ್ಟು ಪೂರ್ಣಗೊಂಡಿದ್ದರೆ 90%ಕ್ಕೆ ತಲುಪಲಿ. ನಾವು ಈ ಮನವಿಯನ್ನು ಆಗಸ್ಟ್ 14 ರಂದು ವಿವರವಾಗಿ ಆಲಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚೀತಾ ಯೋಜನೆ ಮರುಪರಿಚಯಿಸುವ ಕಾರ್ಯಕ್ರಮದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಲು ಯಾವುದೇ ಕಾರಣವಿಲ್ಲ: ಸುಪ್ರೀಂ
- Advertisement
ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲು ನಿರ್ಧರಿಸಲಾಗಿತ್ತು. ರಾಜ್ಯ ಸರ್ಕಾರವು ಈ ವರ್ಷದ ಜನವರಿಯಲ್ಲಿ ಮೊದಲ ಹಂತದ ಕಾರ್ಯವನ್ನು ಆರಂಭಿಸಿತ್ತು. ಆ.1 ರಂದು ರಾಜ್ಯ ಸರ್ಕಾರವು ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಪಾಟ್ನಾ ಹೈಕೋರ್ಟ್ ವಜಾಗೊಳಿಸಿತ್ತು.
- Advertisement
ಏಪ್ರಿಲ್ 15 ರಂದು ಎರಡನೇ ಹಂತದ ಸಮೀಕ್ಷೆಯು ಪ್ರಾರಂಭವಾಗಿತ್ತು. ಜನರ ಜಾತಿ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳಿಗೆ ಸಂಬಂಧಿಸಿದ ಡೇಟಾವನ್ನು ಸಂಗ್ರಹಿಸುವುದೇ ಇದರ ಉದ್ದೇಶವಾಗಿದೆ. ಈ ವರ್ಷದ ಮೇ ವೇಳೆಗೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ಮೇ 4ರಂದು ಹೈಕೋರ್ಟ್ ಜಾತಿ ಗಣತಿಗೆ ವಿರಾಮ ನೀಡಿತ್ತು. ಇದನ್ನೂ ಓದಿ: ಸಿಂಗಾಪೂರ್ ಉದ್ಯಮಿಗಳ ಜೊತೆಗೆ ಕೃಷ್ಣಭೈರೇಗೌಡ ಸಭೆ- 70 ಮಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ
Web Stories