ನವದೆಹಲಿ: ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ (Uniform Dress Code) ಜಾರಿಗೆ ತರಲು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.
ಇಂದು ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠ, ಈ ಪ್ರಕರಣವು ನ್ಯಾಯಾಲಯಕ್ಕೆ ಬರಬಾರದು. ನಾವು ದೇಶಾದ್ಯಂತ ಏಕರೂಪದ ಶಾಲಾ ಸಮವಸ್ತ್ರವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಕೇವಲ ಧರ್ಮಾಧಾರಿತ ಅಲ್ಲ, ಇದು ಲಿಂಗಾಧಾರಿತ ತಾರತಮ್ಯ – ಹಿಜಬ್‌ಗೆ ಅನುಮತಿ ನೀಡಿ
Advertisement
ಹಿರಿಯ ವಕೀಲ ಮತ್ತು ಭಾರತೀಯ ಜನತಾ ಪಕ್ಷದ ವಕ್ತಾರ ಗೌರವ್ ಭಾಟಿಯಾ ನ್ಯಾಯಾಧೀಶರ ಮುಂದೆ ಹಾಜರಾಗಿ, ನ್ಯಾಯಾಲಯಕ್ಕೆ ಕೋರಿರುವುದು ಏಕರೂಪತೆ, ಕೇವಲ ಸಮವಸ್ತ್ರವಲ್ಲ ಎಂದು ತಿಳಿಸಲು ಪ್ರಯತ್ನಿಸಿದರು. ಶಿಕ್ಷಣದ ಹಕ್ಕು ಮತ್ತು ಸಂಸ್ಥೆಗಳಲ್ಲಿ ಶಿಸ್ತಿನ ಅಗತ್ಯವನ್ನು ಉಲ್ಲೇಖಿಸುವಾಗ ಅವರು ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಡ್ರೆಸ್ ಕೋಡ್‌ನಲ್ಲಿ ಏಕರೂಪತೆಗಾಗಿ ಮನವಿ ಮಾಡಿದರು.
Advertisement
ಪ್ರಕರಣದ ವಿಚಾರಣೆಗೆ ನ್ಯಾಯಾಲಯದ ನಿರಾಸಕ್ತಿ ತೋರಿದ ಹಿನ್ನೆಲೆ ಗೌರವ್ ಭಾಟಿಯಾ ಸ್ವಯಂಪ್ರೇರಿತರಾಗಿ PIL ಹಿಂತೆಗೆದುಕೊಳ್ಳಲು ಮನವಿ ಮಾಡಿದರು. ಈ ಮನವಿಯನ್ನು ಪೀಠ ಒಪ್ಪಿದ ಹಿನ್ನೆಲೆ ಅರ್ಜಿಯನ್ನು ವಾಪಸ್ ಪಡೆದರು. ಇದನ್ನೂ ಓದಿ: ಹೆಣ್ಣುಮಕ್ಕಳು ಹಿಜಬ್‌ನ್ನು ತಲೆಗೆ ಧರಿಸುತ್ತಾರೆ, ಮನಸ್ಸಿಗಲ್ಲ – ಓವೈಸಿ
Advertisement
Advertisement
ಸದ್ಯ ಇದೇ ಪೀಠವು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಬ್ (Hijab) ಧರಿಸುವುದರ ಮೇಲಿನ ನಿಷೇಧವನ್ನು ಪರಿಣಾಮಕಾರಿಯಾಗಿ ಎತ್ತಿಹಿಡಿಯುವ ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪನ್ನು ಪ್ರಶ್ನಿಸುವ ಮೇಲ್ಮನವಿಗಳ ಅರ್ಜಿ ವಿಚಾರಣೆ ನಡೆಸುತ್ತಿದೆ. ಹಿಜಬ್ ಧರಿಸಿದ ಕಾರಣಕ್ಕೆ ತರಗತಿಗಳಿಗೆ ಹಾಜರಾಗಲು ಅನುಮತಿ ನಿರಾಕರಿಸಿದ ನಂತರ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.