ಅಕ್ರಮ ಹಣ ವರ್ಗಾವಣೆ ಕೇಸ್‌ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಜಾಮೀನು ನಿರಾಕರಿಸಿದ ಸುಪ್ರೀಂ

Public TV
2 Min Read
Senthil Balaji

ನವದೆಹಲಿ: ಉದ್ಯೋಗಕ್ಕಾಗಿ ನಗದು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ED) ಬಂಧನೊಳಕ್ಕಾಗಿದ್ದ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ (Senthil Balaji) ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ‌.

supreme Court 1

ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್‌ ಚಂದ್ರ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠವು ಜಾಮೀನು ನಿರಾಕರಿಸಿದೆ. ಬಾಲಾಜಿ ಅವರು ವೈದ್ಯಕೀಯ ಜಾಮೀನಿನ (Medical Bail) ಮೇಲೆ ಬಿಡುಗಡೆಯಾಗಲು ಅರ್ಹವಾದಷ್ಟು ಗಂಭೀರವಾದ ಆರೋಗ್ಯ ಸ್ಥಿತಿ ಕಾಣುತ್ತಿಲ್ಲ ಎಂದು ಹೇಳಿ, ಕೆಳ ಹಂತದ ನ್ಯಾಯಾಲಯದಲ್ಲಿ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲು ನಿರ್ದೇಶಿಸಿದೆ‌.

ಅನಾರೋಗ್ಯ, ವೈದ್ಯಕೀಯ ಕಾರಣಗಳನ್ನು ನೀಡಿದ್ದ ಸೆಂಥಿಲ್ ಬಾಲಾಜಿ ಜಾಮೀನು ನೀಡುವಂತೆ ಈ‌ ಮೊದಲು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವರದಿ ಸಲ್ಲಿಕೆಗೆ ನೀಡಿದ್ದ ಗಡುವು ಅಂತ್ಯ – ಕೋರ್ಟ್‌ಗೆ ವರದಿ?

ವಿಚಾರಣೆ ವೇಳೆ ಸೆಂಥಿಲ್ ಬಾಲಾಜಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ, ಆರೋಪಿ ದೀರ್ಘಕಾಲದ ಲ್ಯಾಕುನಾರ್ ಇನ್ಫೆಕ್ಷನ್‌ನಿಂದ ಬಳಲುತ್ತಿದ್ದಾರೆ ವೈದ್ಯಕೀಯ ನೆರವು ಆಧಾರದ ಮೇಲೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಆದ್ರೆ ವಿಚಾರಣೆ ನಡೆಸಿದ ನ್ಯಾಯಪೀಠವು ಈ ಬಗ್ಗೆ ಗೂಗಲ್‌ನಲ್ಲಿ ಪರಿಶೀಲಿಸಲಾಗಿದೆ. ಇದು ಔಷಧಿಗಳ ಮೂಲಕ ಗುಣಪಡಿಸಬಹುದಾದ ಖಾಯಿಲೆ, ಜಾಮೀನು ನೀಡುವಂತ ಸಮಸ್ಯೆಯಲ್ಲ, ಅಂತಹ ಗಂಭೀರವಾದ ಸಮಸ್ಯೆಯಾಗಿದ್ದರೇ ನಾವು ಪರಿಗಣಿಸುತ್ತೇವೆ ಎಂದು ಹೇಳಿದೆ.

ಮುಕುಲ್ ರೊಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕೀಲರು ಪ್ರಸ್ತಾಪಿಸಿದ ವೈದ್ಯಕೀಯ ಜಾಮೀನು ನಿಬಂಧನೆಯ ವ್ಯಾಖ್ಯಾನವನ್ನು ನಾವು ಅನುಸರಿಸಿದರೆ 70% ರಷ್ಟು ಕೈದಿಗಳು ಅನಾರೋಗ್ಯಕ್ಕೀಡಾಗುತ್ತಾರೆ. ಇಂತಹ ಕಾರಣಗಳನ್ನು ಕೋರ್ಟ್ ಪರಿಗಣಿಸಬಾರದು ಎಂದು ಮನವಿ ಮಾಡಿದರು.

ನಂತರ ನ್ಯಾಯಪೀಠವು, ನೀವು ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಬೇಕು. ವೈದ್ಯಕೀಯ ಜಾಮೀನಿಗೆ ಆಧಾರವಾಗಿ ನಿಮ್ಮ ಅನಾರೋಗ್ಯದಿಂದ ನಮಗೆ ತೃಪ್ತಿ ಇಲ್ಲ ಎಂದು ಹೇಳಿತು. ಅಂತಿಮವಾಗಿ, ಜಾಮೀನು ಅರ್ಜಿಯನ್ನು ಹಿಂಪಡೆಯಲು ಮುಕುಲ್ ರೊಹ್ಟಗಿ ಒಪ್ಪಿಕೊಂಡರು. ಇದನ್ನೂ ಓದಿ: ಒಟ್ಟಿಗೆ ಸುತ್ತಾಡುತ್ತಿದ್ದ ಅನ್ಯಕೋಮಿನ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್‌ಗಿರಿ; ಮಂಗಳೂರಲ್ಲಿ ಇಬ್ಬರ ಬಂಧನ

ಕಳೆದ ಜೂನ್‌ ತಿಂಗಳಲ್ಲಿ, ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಮತ್ತು ಎಂ.ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದ ಕ್ಯಾಬಿನೆಟ್ ಸಚಿವರನ್ನು ಜಾರಿ ನಿರ್ದೇಶನಾಲಯವು ರಾಜ್ಯದಲ್ಲಿ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಅವರ ಪಾತ್ರಕ್ಕಾಗಿ ಬಂಧಿಸಿತ್ತು. ಇದನ್ನೂ ಓದಿ: ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

Share This Article