NEET-PG 2021 – ಕೇವಲ 1,456 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಸಾಧ್ಯವಿಲ್ಲ: ಸುಪ್ರೀಂ

Public TV
1 Min Read
SUPREME COURT

ನವದೆಹಲಿ: NEET-PG 2021ರ ಕೋಟಾದಲ್ಲಿ ಖಾಲಿ ಇರುವ ವೈದ್ಯಕೀಯ ಸೀಟುಗಳಿಗೆ ಹೊಸ ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈಗ ಅವಕಾಶ ನೀಡುವುದು ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

40,000 ಸ್ನಾತಕೋತ್ತರ ಸೀಟುಗಳು ಪೈಕಿ NEET-PG 2021ರ ಕೋಟಾದಲ್ಲಿ 1,456 ಸೀಟಗಳು ಖಾಲಿ ಉಳಿದಿದ್ದು ಇವುಗಳ ಭರ್ತಿಗೆ ವಿಶೇಷ ಕೌನ್ಸೆಲಿಂಗ್ ನಡೆಸಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾ. ಎಂ.ಆರ್ ಶಾ ಮತ್ತು ನ್ಯಾ. ಅನಿರುದ್ಧ ಬೋಸ್ ಅವರ ಪೀಠ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

neet research and science study

ಈ ಸಂಬಂಧ ಇಂದು ಆದೇಶ ನೀಡಿದ ಕೋರ್ಟ್, ಈಗಾಗಲೇ 8-9 ಸುತ್ತಿನ ಕೌನ್ಸೆಲಿಂಗ್ ನಡೆಸಲಾಗಿದ್ದು, ಹೊಸದಾಗಿ ಕೌನ್ಸೆಲಿಂಗ್ ನಡೆಸುವುದು ಸರಿಯಲ್ಲ. ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಹೇಳಿದೆ.

ಈ ಹಿಂದೆ NEET-PG 2021ರ ಕೋಟಾದಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಸಿ ಭರ್ತಿ ಮಾಡಲಾಗಿತ್ತು. ಈ ನಡುವೆ ವಿದ್ಯಾರ್ಥಿಗಳು ಮಾಹಿತಿ ಹಕ್ಕಿನಡಿ ಮಾಹಿತಿ ಪಡೆದುಕೊಂಡಾಗ 1,456 ಸೀಟುಗಳು ಖಾಲಿ ಇರುವುದು ತಿಳಿದು ಬಂದಿತ್ತು. ಖಾಸಗಿ ಕಾಲೇಜುಗಳು ಸ್ವಹಿತಾಸಕ್ತಿಗಾಗಿ ಸೀಟುಗಳನ್ನು ಖಾಲಿ ಉಳಿಸಿಕೊಂಡಿವೆ ಎಂದು ಕೆಲವು ವಿದ್ಯಾರ್ಥಿಗಳು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

ಪ್ರಕರಣ ಪ್ರತಿವಾದಿಯಾಗಿ ವಾದ ಮಂಡಿಸಿದ್ದ ಕೇಂದ್ರ ಸರ್ಕಾರ, ವಿದ್ಯಾರ್ಥಿಗಳ ಮನವಿಯನ್ನು ವಿರೋಧಿಸಿತು. ಕೌನ್ಸೆಲಿಂಗ್‌ನ ಸಾಫ್ಟ್‌ವೇರ್ ಮುಚ್ಚಿದೆ, ವಿದ್ಯಾರ್ಥಿಗಳ ಠೇವಣಿ ಹಣವನ್ನು ವಾಪಸ್ ಮಾಡಲಾಗುತ್ತಿದ್ದು ಈ ಹಂತದಲ್ಲಿ ಮುಂದಿನ ಸುತ್ತುಗಳಲ್ಲಿ ಸೀಟುಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ, ಇದು ಮುಂದಿನ ಪ್ರಕ್ರಿಯೆಗಳಿಗೆ ತೊಂದರೆ ಮಾಡಲಿದೆ ಎಂದು ಅಫಿಡವಿಟ್ ಸಲ್ಲಿಸಿತು.

Share This Article
Leave a Comment

Leave a Reply

Your email address will not be published. Required fields are marked *