ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (PCA Act) ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಈ ಮೂಲಕ ಎತ್ತುಗಳನ್ನು ಬಳಸಿ ನಡೆಸಲಾಗುವ ಜಲ್ಲಿಕಟ್ಟು (Jallikattu) ಕ್ರೀಡೆಯ ಜೊತೆಗೆ ಕಂಬಳಕ್ಕೂ (Kambala) ಇದ್ದ ಕಂಟಕ ನಿವಾರಣೆಯಾಗಿದೆ.
ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು (Constitution Bench) ಎತ್ತುಗಳ ನೋವು ಮತ್ತು ಸಂಕಟವನ್ನು ಕಡಿಮೆ ಮಾಡಲು ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ. ನಿಯಮದ ಅನುಸಾರ ಜಲ್ಲಿಕಟ್ಟು ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ
Advertisement
Advertisement
Advertisement
ರಾಜ್ಯದ ಕಾಯ್ದೆಯಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪ್ರಕಾರ ಭಾಗವಹಿಸುವಿಕೆಯನ್ನು ಅನುಮತಿಸಲಾಗುವುದು. ಕಾಯ್ದೆಯೂ ಸಂವಿಧಾನದ 48 ನೇ ವಿಧಿ ಗೋಹತ್ಯೆ ವಿಚಾರಕ್ಕೆ ಇದು ಸಂಬಂಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದಲ್ಲಿ (Maharashtra) ನಡೆಸಲಾಗುವ ಕಂಬಳ ಮತ್ತು ಎತ್ತಿನ ಬಂಡಿ (Bull cart racing) ಓಟಕ್ಕೂ ಅನುಮತಿಸುವ ಕಾನೂನನ್ನು ನ್ಯಾಯಾಲಯ ಎತ್ತಿಹಿಡಿದಿದೆ.
Advertisement
ಈ ಮೇಲೆ ಉಲ್ಲೇಖಿಸಲಾದ ಕ್ರೀಡೆಗಳು, ಆರ್ಟಿಕಲ್ 51ಎ(ಜಿ) ಎಲ್ಲಾ ಜೀವಿಗಳ ಮೇಲೆ ಸಹಾನೂಭೂತಿ ಹೊಂದಿರುವುದು ಮತ್ತು 51ಎ(ಹೆಚ್) ಹಿಂಸೆಯನ್ನು ನಡೆಸದೇ ಇರುವುದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳನ್ನು ಇದು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ತಿದ್ದುಪಡಿ ಮಾಡಲಾದ ಕಾಯಿದೆಗಳು ಹಾಗೂ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ಅನುಷ್ಠಾನ ಜಿಲ್ಲಾಧಿಕಾರಿಗಳ ಜವಬ್ದಾರಿಯಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ತಮಿಳುನಾಡಿನಲ್ಲಿ (Tamil Nadu) ಜನಪ್ರಿಯವಾಗಿರುವ ಜಲ್ಲಿಕಟ್ಟು ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ನಿರ್ದಿಷ್ಟವಾಗಿ ಕ್ರೀಡೆಯ ಸಾಂಸ್ಕøತಿಕ ಅಂಶಕ್ಕೆ ಸಂಬಂಧಿಸಿದ ಆಚರಣೆಯಲ್ಲಿರುವಂತೆ ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿ ಅಥವಾ ಸಂಪ್ರದಾಯವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಆಚರಣೆಯನ್ನು ನಿಯಂತ್ರಿಸುವ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯಿದೆ 2009ನ್ನು ರದ್ದುಪಡಿಸಿತ್ತು.
ಜನವರಿ 2016 ರಲ್ಲಿ, ಕೇಂದ್ರ ಸರ್ಕಾರವು (Central government) ಪಿಸಿಎ ಕಾಯ್ದೆಯ ವ್ಯಾಪ್ತಿಯಿಂದ ಜಲ್ಲಿಕಟ್ಟು ಮತ್ತು ಎತ್ತಿನ ಬಂಡಿ ಓಟಗಳಿಗೆ ವಿನಾಯಿತಿ ನೀಡುವ ಹೊಸ ಅಧಿಸೂಚನೆಯನ್ನು ಹೊರಡಿಸಿತು. ನಂತರ ರಾಜ್ಯ ಸರ್ಕಾರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಿದ್ದುಪಡಿ) ಕಾಯಿದೆ 2017 ಅನ್ನು ಜಾರಿಗೊಳಿಸಿತು. ಈ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ