– ‘ಅಲ್ಲಾ’ನಿಗೆ 5 ಎಕರೆ ಜಮೀನು ಖರೀದಿಸೋದು ದೊಡ್ಡ ಮಾತಲ್ಲ
– ನಮ್ಮ ಹಕ್ಕಿಗಾಗಿ ಹೋರಾಡಿದ್ದೇವೆ
ಹೈದರಾಬಾದ್: ಸುಪ್ರೀಂ ಕೋರ್ಟ್ ಸರ್ವೋಚ್ಚ. ಆದರೆ ದೋಷಾತೀತ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಅಯೋಧ್ಯೆ ಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಓವೈಸಿ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಮುಸ್ಲಿಮರ ಪರ ವಾದಮಂಡಿಸಿದ ವಕೀಲರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ ಎಂದು ತಿಳಿಸಿದೆ. ನನ್ನ ಅಭಿಪ್ರಾಯವು ಕೂಡ ಇದೆ ಆಗಿದೆ ಎಂದರು. ಇದನ್ನೂ ಓದಿ: ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
Advertisement
#Live | Supreme Court is supreme, but not infallible: @asadowaisi, AIMIM chief in a media briefing post the Ayodhya verdict. | #RamMandirInAyodhya https://t.co/YwECz0zJBo pic.twitter.com/qSeYHSmn8v
— TIMES NOW (@TimesNow) November 9, 2019
Advertisement
ಬಾಬ್ರಿ ಮಸೀದಿಯನ್ನು 1992ರಲ್ಲಿ ಹಾಳು ಮಾಡಿದರು. ಅದಾದ ಬಳಿಕ ಆ ಜಾಗದ ಮೇಲೆ ನಿಷೇಧ ಹೇರಿ, ಕೋರ್ಟ್ ತನ್ನ ಸುಪರ್ದಿಗೆ ಪಡೆಯಿತು. ಆದರೆ ಈಗ ಮಸೀದಿ ನಿರ್ಮಾಣಕ್ಕೆ ಪರ್ಯಾಯವಾಗಿ 5 ಎಕರೆ ಜಮೀನನ್ನು ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಭಾರತದ ಸಂವಿಧಾನ ಎಲ್ಲರಿಗೂ ಒಂದೇ. ನಮಗೂ ಸಂವಿಧಾನದ ಮೇಲೆ ಅಪಾರ ಭರವಸೆ ಇದೆ. ನಮಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
Advertisement
ಉತ್ತರ ಪ್ರದೇಶದಲ್ಲಿ ಅಲ್ಲಾನಿಗೆ ಜಮೀನು ಖರೀದಿಸುವುದು ನಮಗೆ ದೊಡ್ಡ ಕಷ್ಟವಲ್ಲ. ಆದರೆ ನಾವು ನಮ್ಮ ಹಕ್ಕಿಗಾಗಿ ಹೋಡುತ್ತಿದ್ದೇವೆ. ಹೈದರಾಬಾದ್‍ನ ಬೀದಿಯಲ್ಲಿ ಹಣ ಸಂಗ್ರಹಿಸಿದರೆ ಸಾಕು ಉತ್ತರ ಪ್ರದೇಶದಲ್ಲಿ ಜಾಗ ಖರೀದಿಸಿ, ಮಸೀದಿ ನಿರ್ಮಿಸಬಹುದು. ನಾವು ಇಷ್ಟು ದಿನ ಪರ್ಯಾಯ ಭೂಮಿಗಾಗಿ ಹೋರಾಡಲಿಲ್ಲ. ಸ್ವಾಭಿಮಾನಕ್ಕಾಗಿ ಹೋರಾಡಿದ್ದೇವೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ದೊಡ್ಡ ಭಾಷಣ ಮಾಡುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತ ವಿಕಾಸದ ದಿಕ್ಕಲ್ಲಿ ಓಡುತ್ತಿದೆ, ಹಿಂದೂ-ಮುಸಲ್ಮಾನರು ಒಗ್ಗೂಡಿ ದೇಶ ಕಟ್ಟೋಣ: ಸೂಲಿಬೆಲೆ