ನವದೆಹಲಿ: ಗೋದ್ರಾ ರೈಲು ದಹನಕಾಂಡ(Godhra Train Burning Case) ಪ್ರಕರಣದಲ್ಲಿ ದೋಷಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದ ಓರ್ವ ಕೈದಿಗೆ ಸುಪ್ರೀಂಕೋರ್ಟ್(Supreme Court) ಜಾಮೀನು ಮಂಜೂರು ಮಾಡಿದೆ.
ಗೋದ್ರಾ ರೈಲ್ವೇ ನಿಲ್ದಾಣದಲ್ಲಿ ಸಬರಮತಿ ಎಕ್ಸ್‌ಪ್ರೆಸ್(Sabarmati Express) ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಕಾರಣ 56 ಕರಸೇವಕರು ಸಜೀವ ದಹನ ಆಗಿದ್ದರು. ಈ ಸಂದರ್ಭದಲ್ಲಿ ಬೋಗಿ ಮೇಲೆ ಕಲ್ಲು ತೂರಿದ್ದ ಫಾರೂಖ್ ಸೇರಿ ಹಲವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಕಳೆದ 17 ವರ್ಷಗಳಿಂದ ಜೈಲಲ್ಲಿದ್ದ ಫಾರೂಖ್ ಸೇರಿ ಹಲವರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸಿಜಿಐ ಚಂದ್ರಚೂಡ್ ನೇತೃತ್ವದ ಪೀಠ, 17 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನ್ನು ಪರಿಗಣಿಸಿ ಫಾರೂಖ್‍ಗೆ ಜಾಮೀನು ಮಂಜೂರು ಮಾಡಿದೆ. ಉಳಿದವರ ಅರ್ಜಿಗಳ ಬಗ್ಗೆ ಶೀಘ್ರವೇ ನಿರ್ಣಯ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಇದನ್ನೂ ಓದಿ: ಚೀನಾ ತಲುಪಬಲ್ಲ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ
ಇದಕ್ಕೂ ಮೊದಲು ದೋಷಿಗಳಿಗೆ ಜಾಮೀನು ನೀಡಬಾರದು ಎಂದು ಗುಜರಾತ್ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. ಗುಜರಾತ್ ಪರವಾಗಿ ಸಾಲಿಸಿಟರಲ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು.
2002 ಫೆ.27 ರಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೆಂಕಿ ಹಚ್ಚಿದ್ದ ಪರಿಣಾಮ 59 ಮಂದಿ ಕರ ಸೇವಕರು ಸಾವನ್ನಪ್ಪಿದ್ದರು. ಈ ಘಟನೆಯ ಮರು ದಿನ ಫೆ.28 ರಿಂದ ಮಾರ್ಚ್ 31ರವರೆಗೆ ಗುಜರಾತ್‌ನ ಅನೇಕ ಕಡೆಗಳಲ್ಲಿ ಕೋಮು ಗಲಭೆ ನಡೆದು 1,200 ಮಂದಿ ಸಾವನ್ನಪ್ಪಿದ್ದರು.