– ಪೋಷಕರು, ಮಗಳ ಪೋಷಣೆಗಾಗಿ ಜಾಮೀನು ಕೋರಿದ್ದ ಪವಿತ್ರಾ ಗೌಡ
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆದೇಶವನ್ನ ಪುನರ್ ಪರಿಶೀಲಿಸುವಂತೆ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ನ್ಯಾಯಮೂರ್ತಿ ಜೆ.ಬಿ ಪರ್ದಿವಾಲಾ ಹಾಗೂ ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಅರ್ಜಿ ವಿಚಾರಣೆ ವೇಳೆ ನಾವು ಆದೇಶ ಮತ್ತು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಮತ್ತೊಮ್ಮೆ ಪರಿಶೀಲನೆ ನಡೆಸಿ ಆದೇಶ ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ನಮ್ಮ ಮೇಲಿರುವ ಆರೋಪಗಳು ಸುಳ್ಳು ಎಂದ ಡಿ ಗ್ಯಾಂಗ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?
ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದೇಶ ಪರಿಶೀಲನೆ ಕೋರಿ ಸುಪ್ರೀಂಗೆ ಕೊಲೆ ಆರೋಪಿ ಪವಿತ್ರಾ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು.
ಮಗಳು ಮತ್ತು ಪೋಷಕರ ಪೋಷಣೆಗಾಗಿ ಜಾಮೀನು ಕೋರಿದ್ದ ಪವಿತ್ರಾ ಗೌಡ, ಏಕಾಂಗಿಯಾಗಿ ಕಾನೂನು ಹೋರಾಟಕ್ಕೆ ಇಳಿದಿದ್ದರು. ಇದನ್ನೂ ಓದಿ: 2 ತಿಂಗಳ ಬಳಿಕ ದರ್ಶನ್ ಜೊತೆ ಮಾತನಾಡಿದ ಪವಿತ್ರಾ ಗೌಡ


