ನವದೆಹಲಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ (Menstrual Leave) ನೀಡುವುದು ಸರ್ಕಾರದ ನೀತಿಯ ವಿಷಯವಾಗಿದೆ. ಈ ವಿಷಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯನ್ನು ಸಂಪರ್ಕಿಸುವಂತೆ ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠ ಹೇಳಿದೆ.
ಮಹಿಳೆಯರಿಗೆ ಋತುಚಕ್ರದ ವೇಳೆ ರಜೆ ನೀಡಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲು ನಿರಾಕರಿಸಿತು. ಕಾರ್ಯದರ್ಶಿಯು ಈ ವಿಷಯವನ್ನು ನೀತಿ ರೂಪಿಸುವ ಮಟ್ಟದಲ್ಲಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವಂತೆ ನಾವು ವಿನಂತಿಸುತ್ತೇವೆ ಮತ್ತು ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ನೋಡುತ್ತೇವೆ. ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಸರ್ಕಾರ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಯನ್ನು ಕೋರಿ ಸಲ್ಲಿಸಲಾದ ಮನವಿಯನ್ನು ನ್ಯಾಯಾಲಯವು ಕಳೆದ ವರ್ಷ ವಿಲೇವಾರಿ ಮಾಡಿತ್ತು. ಸಿಜೆಐ ಚಂದ್ರಚೂಡ್ ನೇತೃತ್ವದ ಪೀಠವು ಪ್ರಕರಣದಲ್ಲಿ ನೀತಿಯ ಆಯಾಮ ಇರುವುದರಿಂದ ಅರ್ಜಿದಾರರು ಕೇಂದ್ರ ಸರ್ಕಾರದ ಮುಂದೆ ಪ್ರಾತಿನಿಧ್ಯವನ್ನು ಸಲ್ಲಿಸಬಹುದು ಎಂದು ತರ್ಕಿಸಿತ್ತು. ಇದನ್ನೂ ಓದಿ: ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಇಂದಿನ ವಿಚಾರಣೆ ವೇಳೆ ನಮ್ಮ ಮನವಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರ ತ್ರಿಪಾಠಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆದಾಗ್ಯೂ ಬೇಡಿಕೆಯು ನೀತಿ ವಿಷಯವನ್ನು ಒಳಗೊಂಡಿರುವ ಕಾರಣ ನ್ಯಾಯಾಲಯದಿಂದ ವ್ಯವಹರಿಸಲಾಗುವುದಿಲ್ಲ ಎಂದು ಸಿಜೆಐ ಚಂದ್ರಚೂಡ್ ಪುನರುಚ್ಚರಿಸಿದರು. ಋತುಚಕ್ರದ ರಜೆಯನ್ನು ಕಡ್ಡಾಯಗೊಳಿಸುವುದರಿಂದ ಉದ್ಯೋಗದಾತರು ಮಹಿಳೆಯರಿಗೆ ಉದ್ಯೋಗ ನೀಡದಿರಲು ಕಾರಣವಾಗಬಹುದು ಎಂಬ ಅಭಿಪ್ರಾಯವೂ ಇದೆ ಎಂದು ಅಭಿಪ್ರಾಯಪಟ್ಟರು.
ಮಹಿಳೆಯನ್ನು ರಕ್ಷಿಸಲು ನಾವು ಏನು ಮಾಡಲು ಪ್ರಯತ್ನಿಸುತ್ತೇವೆಯೋ ಅದು ಅವರ ಅನನುಕೂಲತೆಯನ್ನು ಉಂಟುಮಾಡಬೇಕು, ಇದು ವಾಸ್ತವವಾಗಿ ಸರ್ಕಾರದ ನೀತಿಯ ಅಂಶವಾಗಿದೆ ನ್ಯಾಯಾಲಯಗಳು ಪರಿಶೀಲಿಸಲು ಸಾಧ್ಯವಿಲ್ಲ ಹೀಗಾಗೀ ಸರ್ಕಾರವನ್ನೇ ಸಂರ್ಪಕಿಸಿ ಎಂದು ಸಿಜೆಐ ಹೇಳಿದರು, ಅರ್ಜಿಯನ್ನು ಇತ್ಯರ್ಥಪಡಿಸಿದರು.