– ಧಾರ್ಮಿಕ ವಿಷಯಗಳನ್ನು ನಿಯಂತ್ರಿಸುವುದು ತನ್ನ ವ್ಯಾಪ್ತಿಯಲ್ಲಿಲ್ಲ ಎಂದ ಸುಪ್ರೀಂಕೋರ್ಟ್
ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರ ದೇವಾಲಯದ (Mahakaleshwar Temple) ಗರ್ಭಗುಡಿಗೆ ವಿಐಪಿ ದರ್ಶನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ವಜಾಗೊಳಿಸಿದೆ. ಧಾರ್ಮಿಕ ವಿಷಯಗಳನ್ನು ನಿಯಂತ್ರಿಸುವುದು ತನ್ನ ವ್ಯಾಪ್ತಿಯಲ್ಲಿಲ್ಲ ಮತ್ತು ದೇವಾಲಯದ ಆಡಳಿತ ಮಂಡಳಿಯು ಈ ವಿಷಯಗಳ ಬಗ್ಗೆ ನಿರ್ಧರಿಸಬೇಕು ಎಂದು ಹೇಳಿ ಸುಪ್ರೀಂಕೋರ್ಟ್ ಅರ್ಜಿ ತಿರಸ್ಕರಿಸಿದೆ.
ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಆರ್.ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಅರ್ಜಿದಾರ ದರ್ಪಣ್ ಅವಸ್ಥಿಗೆ ಈ ವಿಷಯದಲ್ಲಿ ದೇವಾಲಯ ಪ್ರಾಧಿಕಾರದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ತಿಳಿಸಿದೆ. ಇದನ್ನೂ ಓದಿ: ಭಾರತ-ಯುರೋಪ್ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ
ದೇವಾಲಯದ ಗರ್ಭಗುಡಿ ಪ್ರವೇಶದ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕು. ನಾಗರಿಕರನ್ನು ವಿಐಪಿ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಇಲ್ಲದಿದ್ದರೆ ಎಲ್ಲರಿಗೂ ಸಮಾನ ಪ್ರವೇಶವನ್ನು ನೀಡಬೇಕು ಎಂದು ವಕೀಲ ವಿಷ್ಣು ಶಂಕರ್ ಜೈನ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ದೇವಾಲಯದ ಗರ್ಭಗುಡಿಯೊಳಗೆ ಆರ್ಟಿಕಲ್ 14 (ಸಮಾನತೆಯ ಹಕ್ಕು) ಅನ್ವಯಿಸುತ್ತದೆ ಎಂದು ನಾವು ಭಾವಿಸಿದರೆ, ಜನರು ಆರ್ಟಿಕಲ್ 19 (ವಾಕ್ ಸ್ವಾತಂತ್ರ‍್ಯ) ದಂತಹ ಇತರ ಹಕ್ಕುಗಳನ್ನು ಸಹ ಪಡೆದುಕೊಳ್ಳುತ್ತಾರೆ. ಮೊದಲು, ಬೇರೊಬ್ಬರು ಪ್ರವೇಶಿಸುತ್ತಿರುವುದರಿಂದ ನನಗೆ ಪ್ರವೇಶಿಸುವ ಹಕ್ಕಿದೆ ಎಂದು ನೀವು ಹೇಳುತ್ತೀರಿ. ನಂತರ ನನಗೆ ಮಾತನಾಡುವ ಹಕ್ಕಿರುವುದರಿಂದ ಇಲ್ಲಿ ಮಂತ್ರಗಳನ್ನು ಪಠಿಸುವ ಹಕ್ಕಿದೆ ಎಂದು ನೀವು ಹೇಳುತ್ತೀರಿ. ನಂತರ ಎಲ್ಲಾ ಮೂಲಭೂತ ಹಕ್ಕುಗಳನ್ನು ಗರ್ಭಗುಡಿಯೊಳಗೆ ಪಡೆಯಲಾಗುತ್ತದೆ ಎಂದು ಹೇಳಿದರು.
ಈ ಹಿಂದೆ, ಹೈಕೋರ್ಟ್, ವಿಐಪಿಯನ್ನು ಯಾವುದೇ ಕಾಯ್ದೆ ಅಥವಾ ನಿಯಮದಲ್ಲಿ ವ್ಯಾಖ್ಯಾನಿಸಿಲ್ಲ. ಬದಲಾಗಿ ಅದು ದೇವಾಲಯ ನಿರ್ವಹಣಾ ಸಮಿತಿ ಮತ್ತು ಜಿಲ್ಲಾಧಿಕಾರಿಗಳು ಚಲಾಯಿಸಬೇಕಾದ ಆಡಳಿತಾತ್ಮಕ ವಿವೇಚನೆಯ ವಿಷಯವಾಗಿದೆ ಎಂದು ಹೇಳಿತ್ತು.ಇದನ್ನೂ ಓದಿ: ಆಸ್ತಿಗಾಗಿ ಕೊಲೆ ಆರೋಪ – ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಾಸ್ಪದ ಸಾವು

