ನವದೆಹಲಿ : ಜಾರಿ ನಿರ್ದೇಶನಾಲಯದ (Enforcement Directorate) ಇಕ್ಕಳದಲ್ಲಿ ಸಿಲುಕಿ ನಲುಗಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸುಪ್ರೀಂಕೋರ್ಟ್ (Supreme Court) ಬಿಗ್ ರಿಲೀಫ್ ನೀಡಿದೆ.
2018 ರಲ್ಲಿ ಡಿಕೆಶಿ ವಿರುದ್ಧ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ನ್ಯಾ. ಸೂರ್ಯ ಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠ ಇಂದು ರದ್ದುಗೊಳಿಸಿದೆ. ಲೋಕಸಭೆ ಚುನಾವಣೆ ಹೊತ್ತಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಡಿಕೆಶಿಗೆ ಸಿಕ್ಕಿದ ದೊಡ್ಡ ಗೆಲುವು ಎಂದೇ ವಿಶ್ಲೇಷಿಸಲಾಗುತ್ತಿದೆ.
Advertisement
ಆಗಸ್ಟ್ 2019 ರಲ್ಲಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಡಿ.ಕೆ ಶಿವಕುಮಾರ್ ಮತ್ತು ಇತರೇ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸುದೀರ್ಘ ವಿಚಾರಣೆ ನಡೆಸಿದ್ದ ಪೀಠ ಇಂದು ಮಹತ್ವದ ಆದೇಶ ನೀಡಿದೆ. ಇದನ್ನೂ ಓದಿ: ಮಮತಾ ಸವಾಲು ಸ್ವೀಕಾರ – ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ರಾಜೀನಾಮೆ, ಮಾ.7 ರಂದು ಬಿಜೆಪಿ ಸೇರ್ಪಡೆ
Advertisement
Advertisement
ರದ್ದಾಗಿದ್ದು ಯಾಕೆ?
ಇಂದು ಡಿ.ಕೆ ಶಿವಕುಮಾರ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ಇತರ ಆರೋಪಿಗಳ ಪರ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಮತ್ತು ಎಸ್.ನಾಗಮುತ್ತು ವಾದ ಮಂಡಿಸಿದರು. ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಪ್ರಕರಣ ಕೇವಲ ಶೆಡ್ಯೂಲ್ ಅಪರಾಧಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ಡಿ. ಕೆ ಶಿವಕುಮಾರ್ ಅವರದ್ದು ಆದಾಯ ತೆರಿಗೆ (Income Tax) ಪ್ರಕರಣವಾಗಿದೆ. ಆದಾಯ ತೆರಿಗೆ ಪ್ರಕರಣದಲ್ಲಿ 120 ಬಿ ಬಳಕೆ ಸಾಧ್ಯವಿಲ್ಲ. 120 ಬಿ ಆಧರಿಸಿಯೇ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ. ಆದರೆ 120 ಬಿ ಏಕಾಂಗಿಯಾಗಿ ಬಳಕೆ ಮಾಡಲು ಸಾಧ್ಯವಿಲ್ಲ, ಯಾವುದಾದರೂ ಇತರೇ ಕ್ರಿಮಿನಲ್ ಪ್ರಕರಣಗಳಲ್ಲಿ ಪೂರಕವಾಗಿರುವ 120 ಬಿ ಬಳಕೆ ಮಾಡಬಹುದು. ಆದರೆ ಜಾರಿ ನಿರ್ದೇಶನಾಲಯ 120 ಬಿ ಆಧರಿಸಿಯೇ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿಕೊಂಡು ಬಂಧಿಸಿದೆ. ಇದು ಕಾನೂನು ಬಾಹಿರನಡೆ ಎಂದು ವಾದಿಸಿದರು. ವಾದ ಆಲಿಸಿದ ಕೋರ್ಟ್ ಡಿ.ಕೆ ಶಿವಕುಮಾರ್ ಮತ್ತು ಇತರೆ ಆರೋಪಿಗಳ ಅರ್ಜಿ ಮಾನ್ಯ ಮಾಡಿದ ಕೋರ್ಟ್ 120 ಬಿ ಅಡಿ ದಾಖಲಾಗಿದ್ದ ಪ್ರಕರಣವನ್ನೇ ರದ್ದು ಮಾಡಿತು.
Advertisement
120 ಬಿ ರದ್ದಾದ ಹಿನ್ನಲೆ ಡಿ.ಕೆ ಶಿವಕುಮಾರ್ ಮತ್ತು ಇತರೇ ಆರೋಪಿಗಳ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣ ರದ್ದಾಂತಾಗಲಿದೆ. ಈ ನಡುವೆ ಡಿ.ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಕೇಸ್ ಮುಂದುವರಿಯಲಿದ್ದು ಈ ಬಗ್ಗೆ ಮಾಹಿತಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆರು ವಾರಗಳ ಸಮಯ ನೀಡಿದೆ. ಇದನ್ನೂ ಓದಿ: ಭಾರತದ ಮೊದಲ ನೀರೊಳಗಿನ ಮೆಟ್ರೋ ಉದ್ಘಾಟನೆ – ನಾಳೆ ಪ್ರಧಾನಿ ಮೋದಿ ಚಾಲನೆ
ಏನಿದು ಪ್ರಕರಣ?
2017 ರಲ್ಲಿ ಡಿ.ಕೆ ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ನಡೆಸಿತು. ಅವರ ದೆಹಲಿಯ ನಿವಾಸದಲ್ಲಿ ಸುಮಾರು 7 ಕೋಟಿ ನಗದು ವಶಪಡಿಸಿಕೊಳ್ಳಲಾಗಿತ್ತು. ಐಟಿ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿದ್ದ ಇಡಿ ಸುದೀರ್ಘ ವಿಚಾರಣೆಯ 2019ರ ಸೆಪ್ಟೆಂಬರ್‌ನಲ್ಲಿ ಇಡಿ ಬಂಧಿಸಿತ್ತು. 2019 ರ ಅಕ್ಟೋಬರ್‌ನಲ್ಲಿ ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ನಂತರ ಅದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು.
ತಮ್ಮ ಬಂಧನಕ್ಕೂ ಮುನ್ನ ಡಿ.ಕೆ ಶಿವಕುಮಾರ್ ಮತ್ತು ಇತರರು ತಮಗೆ ಜಾರಿ ಮಾಡಿರುವ ಇಡಿ ಸಮನ್ಸ್ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 2019 ರಲ್ಲಿ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಈ ರಿಟ್ ಅರ್ಜಿಗಳನ್ನು ವಜಾಗೊಳಿಸಿದ್ದರು. ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು.