ನವದೆಹಲಿ: 2012ರ ದೆಹಲಿ ಗ್ಯಾಂಗ್ ರೇಪ್ ನಿರ್ಭಯಾ ಪ್ರಕರಣದ ಇಬ್ಬರು ದೋಷಿಗಳು ಸಲ್ಲಿಸಿದ್ದ ಕ್ಯೂರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ದೋಷಿಗಳಾದ ವಿನಯ್ ಕುಮಾರ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಸುಪ್ರೀಂ ಕೋರ್ಟಿಗೆ ಕ್ಯೂರೇಟಿವ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಎನ್.ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠ ಈ ಅರ್ಜಿಯನ್ನು ವಜಾಗೊಳಿಸಿದೆ.
Advertisement
2012 Delhi gang rape case: Supreme Court dismisses curative petitions of two convicts – Vinay Kumar Sharma and Mukesh Singh. pic.twitter.com/9Nsh1AZMaU
— ANI (@ANI) January 14, 2020
Advertisement
ಈ ಬಗ್ಗೆ ಸಂತ್ರಸ್ತೆಯ ತಾಯಿ ಆಶಾ ದೇವಿ ಪ್ರತಿಕ್ರಿಯಿಸಿ, ಇದು ನನಗೆ ಮಹತ್ವದ ದಿನವಾಗಿದೆ. ನಾನು ನನ್ನ ಮಗಳಿಗೆ ನ್ಯಾಯ ಕೊಡಿಸಲು ಸತತ 7 ವರ್ಷದಿಂದ ಹೋರಾಡುತ್ತಿದ್ದೇನೆ. ಜ. 22ರಂದು ದೋಷಿಗಳಿಗೆ ಗಲ್ಲಿಗೆ ಹಾಕುತ್ತಾರೆ. ಆ ದಿನ ನನ್ನ ಜೀವನದ ಹೆಚ್ಚು ಮಹತ್ವರ ದಿನ ಎಂದು ಹೇಳಿಕೊಂಡಿದ್ದಾರೆ.
Advertisement
Asha Devi, mother of 2012 Delhi gang-rape victim: This is a big day for me. I had been struggling for the last 7 years. But the biggest day will be 22nd January when they (convicts) will be hanged. https://t.co/GBfPt9ezIb pic.twitter.com/uMPcVfP7Sf
— ANI (@ANI) January 14, 2020
Advertisement
ನಿರ್ಭಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದೋಷಿಗಳಿಗೆ ಈಗಾಗಲೇ ಗಲ್ಲು ಶಿಕ್ಷೆ ಖಾಯಂ ಆಗಿದೆ. ಜನವರಿ 22ಕ್ಕೆ ನೇಣುಗಂಬ ಏರಲಿದ್ದಾರೆ. ಈ ಹಿಂದೆ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಮರು ಪರಿಶೀಲನಾ ಅರ್ಜಿ ವಜಾ ಆದ ಬಳಿಕ ಪಟಿಯಾಲ ಹೌಸ್ ಕೋರ್ಟ್ ಜನವರಿ 22ರ ಬೆಳಗ್ಗೆ ಏಳು ಗಂಟೆಗೆ ಡೆತ್ ವಾರೆಂಟ್ ಜಾರಿ ಮಾಡಿತ್ತು. ಇದರ ಬೆನ್ನಲ್ಲೇ ಮರಣದಂಡನೆಯಿಂದ ಪಾರಾಗಲು ಕೊನೆಯ ಪ್ರಯತ್ನವಾಗಿ ವಿನಯ್ ಕುಮಾರ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಕ್ಯೂರೇಟಿವ್ ಅರ್ಜಿ ಸಲ್ಲಿಸಿ ಡೆತ್ ವಾರಂಟ್ ಜಾರಿಯಾಗದಂತೆ ಮನವಿ ಮಾಡಿಕೊಂಡಿದ್ದರು.