ನವದೆಹಲಿ: ಭಾರತದ ಮೇಲೆ ವಿಶ್ವ ಫುಟ್‌ಬಾಲ್‌ನ ಆಡಳಿತ ಮಂಡಳಿ (ಫಿಫಾ) ಹೇರಿರುವ ಅಮಾನತನ್ನು ತೆರವುಗೊಳಿಸಲು ತಾನು ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಕಾರ್ಯಕಾರಿ ಸಮಿತಿಯ ಆಯ್ಕೆ ಸಂಬಂಧ ಚುನಾವಣೆಯನ್ನು ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಗೆ ಸುಪ್ರೀಂ ಸೋಮವಾರ ಒಪ್ಪಿಗೆ ನೀಡಿದೆ.
Advertisement
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಎಐಎಫ್‌ಎಫ್‌ನ ದೈನಂದಿನ ವ್ಯವಹಾರಗಳು ಸದ್ಯಕ್ಕೆ 36 ರಾಜ್ಯ ಸಂಘಗಳು ಈಗಾಗಲೇ ಆಯ್ಕೆ ಮಾಡಿರುವ ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ನಿರ್ವಹಣೆಯಾಗಬೇಕು ಎಂದು ಎಂದು ಆದೇಶಿಸಿದೆ.
Advertisement
Advertisement
ಪ್ರಸ್ತುತ ಎಐಎಫ್‌ಎಫ್ ಅನ್ನು ನಡೆಸುತ್ತಿರುವ ಆಡಳಿತಾಧಿಕಾರಿಗಳ ಸಮಿತಿ (CoA) ಇನ್ನು ಮುಂದೆ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಫಿಫಾ ಭಾರತವನ್ನು ಅಮಾನುತು ಮಾಡಿದ್ದು ಯಾಕೆ? ಇಲ್ಲಿ ಪೂರ್ಣ ಮಾಹಿತಿ
Advertisement
ಫಿಫಾ ಎಐಎಫ್‌ಎಫ್ ಮೇಲೆ ಹೇರಿದ ಅಮಾನತನ್ನು ತೆರವುಗೊಳಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದಿರುವ ಸುಪ್ರೀಂ ಭಾರತದಲ್ಲಿ 17 ವರ್ಷದೊಳಗಿನವರ ಮಹಿಳೆಯರ ವಿಶ್ವಕಪ್ ಆಯೋಜನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಫಿಫಾ ನ್ಯಾಯಾಲಯ ನೇಮಿಸಿದ ಸಮಿತಿಯ ಜೊತೆ ವ್ಯವಹಾರ ನಡೆಸುವುದಿಲ್ಲ. ಹೀಗಾಗಿ ಆಡಳಿತಾಧಿಕಾರಿಗಳ ಸಮಿತಿಯಯನ್ನು ಕೂಡಲೇ ರದ್ದುಗೊಳಿಸಬೇಕು. ಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿಯಿಂದ ವ್ಯವಹಾರ ನಡೆಸುವಂತೆ ನಿರ್ದೇಶನ ನೀಡಬೇಕು ಮತ್ತು ಈ ಕೂಡಲೇ ಚುನಾವಣಾ ಪ್ರಕ್ರಿಯೆ ನಡೆಸುವಂತೆ ಆದೇಶಿಸಬೇಕೆಂದು ಕೇಂದ್ರ ಸರ್ಕಾರ ಇಂದು ಸುಪ್ರೀಂ ಮುಂದೆ ಮನವಿ ಮಾಡಿತ್ತು.
ಮೇ 18 ರಂದು ಸುಪ್ರೀಂ ಕೋರ್ಟ್ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ವಿಸರ್ಜಿಸಿತು ಮತ್ತು ದೇಶದಲ್ಲಿ ಫುಟ್‌ಬಾಲ್ ಕ್ರೀಡೆಯನ್ನು ನಿಯಂತ್ರಿಸಲು ಮೂರು ಸದಸ್ಯರ ಆಡಳಿತಾಧಿಕಾರಿಗಳ ಸಮಿತಿ(CoA) ನೇಮಿಸಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ. ಎಆರ್ ದವೆ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಮತ್ತು ಭಾರತೀಯ ಪುರುಷರ ಫುಟ್ಬಾಲ್ ತಂಡದ ಮಾಜಿ ನಾಯಕ ಭಾಸ್ಕರ್ ಗಂಗೂಲಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.