ನವದೆಹಲಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಇದೇ 12 ರಂದು ಮತದಾನ ಮಾಡಲು ಬಳ್ಳಾರಿಗೆ ತೆರಳು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಜನಾರ್ದನ ರೆಡ್ಡಿ ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ತಂಗಲು ಅನುಮತಿ ನೀಡುವಂತೆ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮತದಾನ ಮಾಡಲು ಸಾಕಷ್ಟು ಬೇರೆ ವಿಧಾನಗಳಿವೆ. ಅದ್ದರಿಂದ ಬದಲಿ ವಿಧಾನದ ಮೂಲಕ ಮತದಾನ ಮಾಡುವಂತೆ ಸೂಚಿಸಿದೆ.
ಬಳ್ಳಾರಿಗೆ ಜನಾರ್ದನ ರೆಡ್ಡಿ ಭೇಟಿ ನೀಡುವುದರಿಂದ ಬಳ್ಳಾರಿಯ ರಾಜಕೀಯ ಮೇಲೆ ಪ್ರಭಾವ ಉಂಟಾಗಬಹುದು ಎಂಬ ಕಾರಣ ನೀಡಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಹಿಂದೆ ಜಾಮೀನು ವೇಳೆ ವಿಧಿಸಿದ್ದ ಷರತ್ತನ್ನು ಬದಲಾವಣೆ ಮಾಡುವಂತೆ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಳ್ಳಾರಿಗೆ ಹೋಗದಂತೆ ವಿಧಿಸಿದ್ದ ಷರತ್ತಿನಲ್ಲಿ ಸಡಿಲಿಕೆ ಇಲ್ಲ. ಅಲ್ಲದೇ ಆಂಧ್ರದ ಕರ್ನೂಲು, ಅನಂತಪುರಂಗೂ ಭೇಟಿ ನೀಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ ಮಗಳ ಮದುವೆಗಾಗಿ ಜರ್ನಾದನ ರೆಡ್ಡಿ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.