ನವದೆಹಲಿ: ಸದ್ಗುರು ಜಗ್ಗಿ ವಾಸುದೇವ್‌ಗೆ (Jaggi Vasudev) ಬಿಗ್ ರಿಲೀಫ್ ಸಿಕ್ಕಿದೆ. ತಮ್ಮ ಮಕ್ಕಳನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಇಶಾ ಫೌಂಡೇಶನ್‌ನ (Isha Foundation) ಆಶ್ರಮದಲ್ಲಿ ಅಕ್ರಮವಾಗಿ ಇಟ್ಟಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸದ್ಗುರು ಜಗ್ಗಿ ವಾಸುದೇವ್ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ತಮ್ಮ ಇಬ್ಬರು ಹೆಣ್ಣು ಮಕ್ಕಳ ತಲೆಕೆಡಿಸಿ ಬಲವಂತವಾಗಿ ಬಂಧಿಸಿ ಆಶ್ರಮದಲ್ಲಿ ಇರಿಸಲಾಗಿದೆ ಎಂದು ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಅಡಿಯಲ್ಲಿ ನಡೆಯುತ್ತಿದ್ದ ಎಲ್ಲ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
Advertisement
ನ್ಯಾಯಾಲಯವು ಇಬ್ಬರು ಮಹಿಳೆಯ ಜತೆ ಮಾತನಾಡಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. ಅವರು ಈಶಾ ಫೌಂಡೇಷನ್‌ನಲ್ಲಿನ ತಮ್ಮ ಸ್ವ ಇಚ್ಚೆಯಿಂದ ವಾಸವಾಗಿದ್ದೇವೆ ಎಂದು ಹೇಳಿಕೆ ನೀಡಿದ್ದರು.
Advertisement
ಆಶ್ರಮದಲ್ಲಿ ಯಾರನ್ನೂ ಅಕ್ರಮವಾಗಿ ಇರಿಸಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳೇ ಹೇಳಿಕೆ ನೀಡಿದ್ದಾರೆ. ಅಕ್ರಮವಾಗಿ ಇರಿಸಿರುವ ಬಗ್ಗೆ ಪೂರಕ ಸಾಕ್ಷ್ಯಾಧಾರಗಳು ಇಲ್ಲದೇ ಇರುವುದರಿಂದ ಪ್ರಕರಣ ವಜಾಗೊಳಿಸಲಾಗಿದೆ ಎಂದು ಸುಪ್ರೀಂ ತನ್ನ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿದ್ದ ವೈದ್ಯಕೀಯ ದಾಖಲೆಗಳಿಂದ ಹಮಾಸ್ ನಾಯಕ ಸಿನ್ವಾರ್ ಗುರುತು ಪತ್ತೆ!
Advertisement
Advertisement
ಏನಿದು ಪ್ರಕರಣ?
ನಿವೃತ್ತ ಪ್ರೊಫೆಸರ್ ಎಸ್ ಕಾಮರಾಜ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಫೌಂಡೇಶನ್ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಅವರ ತಮ್ಮ ಪುತ್ರಿಯರಾದ ಲತಾ ಮತ್ತು ಗೀತಾ ಅವರನ್ನು ಆಶ್ರಮದಲ್ಲಿ ಒತ್ತೆಯಾಳಾಗಿ ಇರಿಸಲಾಗಿದೆ. ಒತ್ತಾಯ ಪೂರ್ವಕವಾಗಿ ಅವರನ್ನು ಸನ್ಯಾಸಿನಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು.
ಈ ಅರ್ಜಿಯನ್ನು ಪುರಸ್ಕರಿಸಿದ್ದ ಮದ್ರಾಸ್ ಹೈಕೋರ್ಟ್ ಇಶಾ ಫೌಂಡೇಶನ್‌ಗೆ ಸಂಬಂಧಿಸಿದ ಎಲ್ಲಾ ಅಪರಾಧ ಪ್ರಕರಣಗಳಲ್ಲಿ ತಮಿಳುನಾಡು ಪೊಲೀಸರು ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಮರುದಿನ ಅಕ್ಟೋಬರ್ 1 ರಂದು, ಸುಮಾರು 150 ಪೊಲೀಸರು ತನಿಖೆಗಾಗಿ ಆಶ್ರಮದ ಮೇಲೆ ದಾಳಿ ನಡೆಸಿದ್ದರು. ಹೈಕೋರ್ಟ್ ಆದೇಶವನ್ನು ಇಶಾ ಫೌಂಡೇಶನ್ ಸುಪ್ರೀಂನಲ್ಲಿ ಪ್ರಶ್ನಿಸಿತ್ತು.
ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ 2009ರಲ್ಲಿ ಇಬ್ಬರು ಆಶ್ರಮಕ್ಕೆ ಬಂದಿದ್ದರು ಎಂದು ಇಶಾ ಫೌಂಡೇಶನ್ ತಿಳಿಸಿತ್ತು. ಆಗ ಅವರ ವಯಸ್ಸು 24 ಮತ್ತು 27 ವರ್ಷ ಆಗಿತ್ತು. ಇಬ್ಬರೂ ಸಹೋದರಿಯರು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಇಲ್ಲೇ ನೆಲೆಸಿದ್ದಾರೆ ಎಂದು ಹೇಳಿತ್ತು.