ನವದೆಹಲಿ: ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ (Supreme Court) ಮಂಗಳವಾರ ತಮಿಳುನಾಡಿನಲ್ಲಿ ರ‍್ಯಾಲಿಗಳನ್ನು (March) ನಡೆಸಲು ಆರ್‌ಎಸ್‍ಎಸ್‍ಗೆ (RSS) ಅನುಮತಿ ನೀಡಿದೆ.
ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು (Tamil Nadu) ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ.ರಾಮಸುಬ್ರಮಣಿಯನ್ ಮತ್ತು ಪಂಕಜ್ ಮಿತ್ತಲ್ ಅವರಿದ್ದ ಪೀಠ ವಜಾ ಮಾಡಿದೆ. ಆರ್‌ಎಸ್‍ಎಸ್ ತಮಿಳುನಾಡಿನಲ್ಲಿ ನಿರ್ಬಂಧಗಳಿಲ್ಲದೆ ಮರುನಿಗದಿಪಡಿಸಿದ ದಿನದಂದು ಪಥ ಸಂಚಲನ ನಡೆಸಲು ಮದ್ರಾಸ್ ಹೈಕೋರ್ಟ್ (Madras High Court) ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
Advertisement
Advertisement
ಆಜಾದಿ ಕಾ ಅಮೃತ್ ಮಹೋತ್ಸವ (Azadi Ka Amrit Mahotsav) ಮತ್ತು ಗಾಂಧಿ ಜಯಂತಿಯಂದು (Gandhi Jayanti) ಮೆರವಣಿಗೆ ನಡೆಸಲು ಅಕ್ಟೋಬರ್‌ನಲ್ಲಿ ಆರ್‌ಎಸ್‍ಎಸ್ ತಮಿಳುನಾಡು ಸರ್ಕಾರದ ಅನುಮತಿ ಕೋರಿತ್ತು. ಆದರೆ ರಾಜ್ಯ ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಆರ್‌ಎಸ್‍ಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
Advertisement
ನವೆಂಬರ್‌ನಲ್ಲಿ ಏಕ ನ್ಯಾಯಾಧೀಶ ಪೀಠವು ಆರ್‌ಎಸ್‍ಎಸ್ ಮೆರವಣಿಗೆಯನ್ನು ಒಳಾಂಗಣದಲ್ಲಿ ಅಥವಾ ಸುತ್ತುವರಿದ ಸ್ಥಳಗಳಲ್ಲಿ ನಿಬರ್ಂಧಿಸುವಂತಹ ಷರತ್ತುಗಳೊಂದಿಗೆ ಅನುಮತಿ ನೀಡಿತ್ತು. ಫೆಬ್ರವರಿಯಲ್ಲಿ ಈ ನಿರ್ಬಂಧಗಳನ್ನು ವಿಭಾಗೀಯ ಪೀಠವು ತೆಗೆದುಹಾಕಿತ್ತು. ಇದನ್ನೂ ಓದಿ: ಪಕ್ಷೇತರನಿಗೆ ಬಿದ್ದ ಅನಿರೀಕ್ಷಿತ ಮತ ಸಿದ್ದು ಪಾಲಿಗೆ ವರವಾಯ್ತು!
Advertisement
ರಾಜ್ಯದಲ್ಲಿ ಮೆರವಣಿಗೆ ನಡೆಸಲು ಆರ್‌ಎಸ್‍ಎಸ್‍ಗೆ ಅನುಮತಿ ನೀಡಿರುವ ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಡಿಎಂಕೆ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಈ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದನ್ನೂ ಓದಿ: ಚುನಾವಣಾ ರಾಜಕಾರಣಕ್ಕೆ ಈಶ್ವರಪ್ಪ ಗುಡ್‍ಬೈ