ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (Chief Election Commissioners) ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸುಪ್ರೀಂ ಕೋರ್ಟ್ (Supreme Court) ತಾತ್ಕಾಲಿಕ ಸಮಿತಿ ರಚನೆ ಮಾಡಿದ್ದು, ಕೇಂದ್ರ ಸರ್ಕಾರದ (Government Of India) ಬಳಿ ಇದ್ದ ಅಧಿಕಾರವನ್ನು ಸಾಂವಿಧಾನಿಕ ಪೀಠ ಕಿತ್ತುಕೊಂಡು ಐತಿಹಾಸಿಕ ತೀರ್ಪು ನೀಡಿದೆ.
ನಿರ್ದಿಷ್ಟ ಕಾನೂನು ರಚನೆಯಾಗುವವರೆಗೆ ಚುನಾವಣಾ ಆಯಕ್ತರ ನೇಮಕದಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ (ಅತಿದೊಡ್ಡ ಏಕೈಕ ಪಕ್ಷ) ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಅವರನ್ನೊಳಗೊಂಡ ಸಮಿತಿಯ ಸಲಹೆ ಪಡೆಯುವಂತೆ ಕೋರ್ಟ್ ಆದೇಶ ನೀಡಿದೆ. ಸಮಿತಿಯ ಶಿಫಾರಸು ಆಧರಿಸಿ ರಾಷ್ಟ್ರಪತಿಗಳು (President Of India) ಆಯುಕ್ತರನ್ನು ನೇಮಕ ಮಾಡಲಿದ್ದಾರೆ ಎಂದೂ ಒತ್ತಿ ಹೇಳಿದೆ.
Advertisement
Advertisement
ಪ್ರಕರಣ ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾ. ಕೆ.ಎಂ ಜೋಸೆಫ್, ನ್ಯಾ. ಅಜಯ್ ರಸ್ತೋಗಿ, ನ್ಯಾ. ಅನಿರುದ್ಧ ಬೋಸ್, ನ್ಯಾ. ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿ.ಟಿ ರವಿ ಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು ಈ ಮಹತ್ವದ ಆದೇಶ ನೀಡಿದೆ. ಇದನ್ನೂ ಓದಿ: WPL 2023ː ಮಹಿಳೆಯರು, ಹುಡ್ಗೀರಿಗೆ ಪ್ರವೇಶ ಉಚಿತ, ಯಾರೂ ಬೇಕಾದ್ರೂ ಹೋಗ್ಬೋದು
Advertisement
ಕೋರ್ಟ್ ಹೇಳಿದ್ದೇನು?: ಭಾರತದ ಸಂವಿಧಾನದ 324 (2)ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈವರೆಗೂ ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುತ್ತಿತ್ತು.
Advertisement
ಕಾನೂನಿನ ನಿಯಮವನ್ನು ಖಾತರಿಪಡಿಸದ ಚುನಾವಣಾ ಆಯೋಗವು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಅದರ ವ್ಯಾಪಕವಾದ ಅಧಿಕಾರಗಳಲ್ಲಿ ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ನಡೆದುಕೊಂಡರೆ ಅದು ರಾಜಕೀಯ ಪಕ್ಷಗಳ ಫಲಿತಾಂಶಗಳ ಮೇಲೆ ಪರಿಣಾಮ ಬೀರಲಿದೆ. ಇದನ್ನೂ ಓದಿ: ಬೊಮ್ಮಾಯಿಯಿಂದ ಶಿವಾಜಿ ಪುತ್ಥಳಿ ಲೋಕಾರ್ಪಣೆ – ಲಕ್ಷ್ಮಿ ಹೆಬ್ಬಾಳ್ಕರ್ ಗೈರು
ಚುನಾವಣಾ ಆಯೋಗವು ಸ್ವತಂತ್ರವಾಗಿರಬೇಕು, ರಾಜ್ಯಕ್ಕೆ ಬಾಧ್ಯತೆಯ ಸ್ಥಿತಿಯಲ್ಲಿರುವ ವ್ಯಕ್ತಿಯು ಸ್ವತಂತ್ರ ಮನಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಸ್ವತಂತ್ರ ವ್ಯಕ್ತಿ ಅಧಿಕಾರದಲ್ಲಿರುವವರಿಗೆ ಅಕ್ರಮ ನಡೆಯುವುದಿಲ್ಲ. ಹಲವಾರು ದಶಕಗಳು ಕಳೆದಿವೆ. ಆದರೂ ರಾಜಕೀಯ ಪಕ್ಷಗಳು ಇಸಿಐಗೆ ನೇಮಕಾತಿಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನನ್ನು ಪರಿಚಯಿಸಿಲ್ಲ ಎಂದು ಆದೇಶದಲ್ಲಿ ಸುಪ್ರೀಂ ತೀರ್ಪಿನಲ್ಲಿ ಉಲ್ಲೇಖಿಸಿದೆ.