ನವದೆಹಲಿ: ಆಧಾರ್ ಕಾರ್ಡ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನುಸುಳುಕೋರರ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ವಿದೇಶಿಗರನ್ನ ಮತದಾರರ ಪಟ್ಟಿಯಲ್ಲಿ ಸೇರಿಸೋದಕ್ಕೆ ಆಧಾರ್ ಕಾರ್ಡ್ ಒಂದೇ ಸಾಕಾ ಎಂದು ಕೇಳಿದೆ. ಆಧಾರ್ ಮತ್ತು ಕಲ್ಯಾಣ ಸವಲತ್ತುಗಳನ್ನ ಪಡೆಯಲು ಯಶಸ್ವಿಯಾಗಿರುವ ವಿದೇಶಿಯರಿಗೆ ಮತದಾನಕ್ಕೆ ಅವಕಾಶ ನೀಡಬೇಕೇ ಎಂದು ಚಾಟಿ ಬೀಸಿದೆ.
ಸಿಜೆಐ (CJI) ಸೂರ್ಯಕಾಂತ್ ನೇತೃತ್ವದ ಪೀಠವು ಇಂದು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಚುನಾವಣಾ ಆಯೋಗದ (Election Commission) ಕ್ರಮದ ಸಿಂಧುತ್ವ ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ, ಮತದಾನದ ಹಕ್ಕುಗಳಿಗೆ ಆಧಾರ್ ಮಾತ್ರವೇ ಸ್ವಯಂಚಾಲಿತ ಮಾರ್ಗವಾಗಬಹುದೇ ಎಂದು ಕೇಳಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಶೀಘ್ರವೇ SIR- ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಆಯೋಗ ಮಾಹಿತಿ

ʻಆಧಾರ್ʼ ಒಂದು ಕಾನೂನಿನ ರಚನೆಯಾಗಿದೆ. ಕಲ್ಯಾಣ ಸೌಲಭ್ಯಗಳನ್ನ ಪಡೆಯಲು ಆಧಾರ್ ಕಾರ್ಡ್ (Aadhaar Card) ಬಳಕೆಯನ್ನ ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಹಾಗಂತ ಆಧಾರ್ ಪಡೆದಿರುವ ಕಾರಣಕ್ಕೆ ಮತದಾರರನ್ನಾಗಿ ಮಾಡಬೇಕು ಎಂದರ್ಥವೇ? ಎಂದು ಪೀಠವು ಪ್ರಶ್ನೆ ಮಾಡಿದೆ. ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಗಿಯೋವರೆಗೆ SIR ಪ್ರಕ್ರಿಯೆ ಮುಂದೂಡಲು ಸುಪ್ರೀಂಗೆ ಕೇರಳ ಸರ್ಕಾರ ಮನವಿ
ಆಧಾರ್ ಅನ್ನೋದು ಸವಲತ್ತುಗಳನ್ನು ಪಡೆಯಲು ರೂಪಿಸಲಾದ ಒಂದು ಕಾನೂನು. ಅದಕ್ಕಾಗಿಯೇ ಅದು ಇತರ ದಾಖಲೆಗಳ ಪಟ್ಟಿಯಲ್ಲಿ ಒಂದಾಗಿರುತ್ತದೆ ಎಂದು ಹೇಳಿದ್ದೇವೆ. ಒಬ್ಬ ವ್ಯಕ್ತಿಗೆ ಪಡಿತರಕ್ಕಾಗಿ ಆಧಾರ್ ನೀಡಲಾಗಿದೆ ಅಂದ ಮಾತ್ರಕ್ಕೆ ಅವರನ್ನ ಮತದಾರನನ್ನಾಗಿ ಮಾಡಬೇಕೇ? ಯಾರಾದ್ರೂ ನೆರೆಯ ದೇಶಕ್ಕೆ ಸೇರಿದವರು ಅಥವಾ ಕಾರ್ಮಿಕರು ಕೆಲಸ ಮಾಡಿತ್ತಿದ್ದರೆ, ಅವರಿಗೆ ಸೌಲಭ್ಯ ಕೊಟ್ಟ ಮಾತ್ರಕ್ಕೆ ವೋಟಿಂಗ್ ಹಕ್ಕು ಕೊಡಬೇಕೇ? ಆಧಾರ್ ಕಾರ್ಡ್ ಪೌರತ್ವದ ಸಾಕ್ಷ್ಯ ನೀಡುವುದಿಲ್ಲ. ಕಾಳಜಿ ಇದ್ದರೆ, ಗಡಿ ರಾಜ್ಯಗಳಿಗೆ ಅನ್ವಯಿಸಬಹುದು. ಆದ್ರೆ ಕೇರಳ ಮತ್ತು ಬಿಹಾರದಂತಹ ರಾಜ್ಯಗಳಿಗೆ ಏಕರೂಪವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಚುನಾವಣಾ ಸಂಸ್ಥೆಯು ಪೋಸ್ಟ್ ಆಫೀಸ್ ಅಲ್ಲ. ಮತದಾರರ ಪಟ್ಟಿಯಲ್ಲಿ ಸೇರಿಸಲು ಕೋರಿ ಫಾರ್ಮ್-6 ಅರ್ಜಿಯೊಂದಿಗೆ ಸಲ್ಲಿಸಲಾದ ದಾಖಲೆಗಳ ನಿಖರತೆಯನ್ನ ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ಒತ್ತಿ ಹೇಳಿದೆ.
ಮುಂದುವರಿದು, ತಮಿಳುನಾಡು ಕೇರಳ, ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಅಭಿಯಾನ ಪ್ರಶ್ನಿಸುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮಯ ನಿಗದಿಮಾಡಿದೆ. ಜೊತೆಗೆ ಡಿಸೆಂಬರ್ 1ರ ಒಳಗೆ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಪೀಠವು ಸೂಚಿಸಿದೆ. ಆಯೋಗ ಪ್ರತಿಕ್ರಿಯೆ ಸಲ್ಲಿಸಿದ ಬಳಿಕ ಅರ್ಜಿದಾರರು ತಮ್ಮ ಪ್ರತಿವಾದಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.
2ನೇ ಹಂತದ ಎಸ್‌ಐಆರ್ ಅಭಿಯಾನ 12 ರಾಜ್ಯಗಳು ಹಾಗೂ ಕೇಂದ್ರಾದಳಿತ ಪ್ರದೇಶಗಳಲ್ಲಿ ನಡೆಯಲಿದೆ.

