ನವದೆಹಲಿ: ಅನಿವಾರ್ಯವಾದರೇ ದೆಹಲಿಯನ್ನು ಎರಡು ದಿನ ಲಾಕ್ ಡೌನ್ (Lockdown) ಮಾಡುವ ಮೂಲಕ ವಾಯು ಮಾಲಿನ್ಯ (Air Pollution) ವನ್ನು ನಿಯಂತ್ರಣಕ್ಕೆ ತನ್ನಿ ಎಂದು ಸುಪ್ರೀಂಕೋರ್ಟ್ (Supreme Court) ಹೇಳಿದೆ. ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ ಸದಸ್ಯ ಪೀಠ ವಾಯುಮಾಲಿನ್ಯ ಪ್ರಮಾಣ ಕಂಡು ಕಳವಳ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ರಜಾ ದಿನದಂದು ವಿಶೇಷ ವಿಚಾರಣೆ ನಡೆಸಿದ ಪೀಠ ಮಾಲಿನ್ಯವನ್ನು ಕ್ಷಿಪ್ರಗತಿಯಲ್ಲಿ ಕಡಿಮೆ ಮಾಡುವ ಕ್ರಮಗಳೇನು ಎಂದು ಕೇಂದ್ರ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರಶ್ನಿಸಿತು. ಇದಕ್ಕೆ ಉತ್ತರ ನೀಡಿದ ಮಾಲಿನ್ಯ ನಿಯಂತ್ರಣ ಮಂಡಳಿ ರೈತರ ಗೋಧಿ ಬೆಳೆ ಕಟಾವು ಸುಡುತ್ತಿದ್ದು ಇದಕ್ಕೆ ಮಾಲಿನ್ಯಕ್ಕೆ ಕಾರಣ ಎಂದು ಉತ್ತರಿಸಿತು.
Advertisement
Advertisement
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಪ್ರತಿ ಬಾರಿ ರೈತರನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಅಲ್ಲದೇ ಏರ್ ಕ್ವಾಲಿಟಿ ಇಂಡೆಕ್ಸ್ (Air Quality Index) 500 ರಲ್ಲಿ 200 ಪ್ರಮಾಣ ಇಳಿಯಲು ಮಾಡಬೇಕಿರುವ ಕ್ರಮಗಳೇನು ಎಂದು ಮರುಪ್ರಶ್ನಿಸಿದರು. ಇಂತಹ ಮಾಲಿನ್ಯದ ಸಂದರ್ಭದಲ್ಲಿ ಜನರು ಬದುಕುವುದು ಹೇಗೆ?, ಜನರು ಮನೆಯಲ್ಲಿ ಮಾಸ್ಕ್ ಹಾಕಲು ಸೂಚಿಸಲಾಗುತ್ತಿದೆ. ಎರಡು ಮೂರು ದಿನಗಳಲ್ಲಿ ಮಾಲಿನ್ಯ ಪ್ರಮಾಣ ತಗ್ಗಬೇಕು ಅದಕ್ಕೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಿ ಅನಿವಾರ್ಯವಾದರೇ ಎರಡು ದಿನ ದೆಹಲಿ ಮತ್ತು ಎನ್‍ಸಿಆರ್ ಪ್ರದೇಶ ಲಾಕ್ ಡೌನ್ ಮಾಡಿ ಎಂದರು.
Advertisement
Delhi | Air Quality Index (AQI) at 499 (overall) in the 'severe' category, as per SAFAR-India
Visuals from Connaught Place and Supreme Court pic.twitter.com/gqBksZ5uef
— ANI (@ANI) November 13, 2021
Advertisement
ಸದ್ಯದ ಮಾಹಿತಿ ಪ್ರಕಾರ ಮಾಲಿನ್ಯದ ಪ್ರಮಾಣ ತಗ್ಗುವ ಲಕ್ಷಣಗಳಿಲ್ಲ. ಹೀಗಾಗಿ ತುರ್ತು ಕ್ರಮಗಳನ್ನು ಸುಪ್ರೀಂಕೋರ್ಟ್ ಎದುರು ನೋಡುತ್ತಿದ್ದು, ಈ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮಾಡಬಾರದು ಎಂದು ಎಚ್ಚರಿಕೆಯನ್ನು ಕೋರ್ಟ್ ನೀಡಿತು. ಅಲ್ಲದೇ ಕಟಾವಿನ ಬಳಿಕ ಹುಲ್ಲು ಸುಡುತ್ತಿರುವ ಬೆಳವಣಿಗೆಯನ್ನು ಎರಡು ದಿನ ನಿಲ್ಲಿಸಲು ಹರಿಯಾಣ ಮತ್ತು ಪಂಜಾಬ್ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಪರಿಹಾರ ಹಣಕ್ಕಾಗಿ ತಮ್ಮನೊಂದಿಗೆ ಅಕ್ಕ, ಬಾವ ಜಗಳ- ತಮ್ಮನ ಕೊಲೆಯಲ್ಲಿ ಅಂತ್ಯ
ಇದೇ ವೇಳೆ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಮಾಲಿನ್ಯದ ಪ್ರಮಾಣದ ಅಧಿಕವಾಗಿದೆ. ಇದಕ್ಕೂ ಮುನ್ನ ಎರಡು ಸರ್ಕಾರಗಳು ಏನು ಕ್ರಮ ತೆಗೆದುಕೊಂಡಿವೆ. ನಿಯಂತ್ರಣಕ್ಕೆ ಕ್ರಮಗಳೇನು ಎಂದು ಪ್ರಶ್ನಿಸಿತು. ಇದಕ್ಕೆ ಎರಡು ಸರ್ಕಾರಗಳ ಪರ ವಕೀಲರು ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ ಎಂದರು. ಇದಕ್ಕೆ ಮರು ಪ್ರಶ್ನೆ ಮಾಡಿದ ಸುಪ್ರೀಂಕೋರ್ಟ್ ಮಾಲಿನ್ಯ ನಿಯಂತ್ರಣಕ್ಕೆ ಅಳವಡಿಸಿದ ಯಂತ್ರಗಳು ಏನಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಎಲ್ಲ ಮಾಹಿತಿ ನೀಡಲು ಮು.ನ್ಯಾ ಎನ್.ವಿ ರಮಣ ಸೂಚನೆ ನೀಡಿದರು.
Plea on air pollution in Delhi | Supreme Court posts for 15th November the hearing on the plea, asks Centre to inform the Court about the steps taken to control air pollution pic.twitter.com/RTwqmvDKB8
— ANI (@ANI) November 13, 2021