ಇಡಿ ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅಧಿಕಾರಾವಧಿ ವಿಸ್ತರಣೆಗೆ ಸುಪ್ರೀಂ ಸಮ್ಮತಿ

Public TV
2 Min Read
Sanjay Kumar Mishra

ನವದೆಹಲಿ: ಸಂಜಯ್ ಕುಮಾರ್ ಮಿಶ್ರಾ (Sanjay Kumar Mishra) ಅವರನ್ನು ಸೆಪ್ಟೆಂಬರ್ 15 ರವರೆಗೆ ಜಾರಿ ನಿರ್ದೇಶನಾಲಯದ (ED) ನಿರ್ದೇಶಕರಾಗಿ ಮುಂದುವರಿಸಲು ಸುಪ್ರೀಂ ಕೋರ್ಟ್ (Supreme Court) ಗುರುವಾರ ಅನುಮತಿ ನೀಡಿದೆ.

ಕೇಂದ್ರ ಸರ್ಕಾರ ಅವರ ಅಧಿಕಾರಾವಧಿಯನ್ನು ಅಕ್ಟೋಬರ್ 15 ರವರೆಗೆ ವಿಸ್ತರಿಸುವಂತೆ ಕೋರಿದ ಹಿನ್ನೆಲೆ ಮನವಿಯನ್ನು ಪರಿಷ್ಕರಿಸಿ ಪುರಸ್ಕರಿಸಿದೆ. ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (FATF) ಪರಿಶೀಲನೆಯಲ್ಲಿ ಮಿಶ್ರಾ ಅವರ ಅನುಪಸ್ಥಿತಿಯು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆ ರಾಷ್ಟ್ರದ ಹಿತಾಸಕ್ತಿಯಿಂದ ಕೇಂದ್ರ ಸರ್ಕಾರದ ಮನವಿಯನ್ನು ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದನ್ನೂ ಓದಿ: ಕರ್ನಾಟಕ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ: ಸುಪ್ರೀಂ ಸಲಹೆ

Supreme Court 1

1984ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಮಿಶ್ರಾ ಅವರನ್ನು ಇಡಿ ಮುಖ್ಯಸ್ಥರಾಗಿ ಮೂರನೇ ಬಾರಿಗೆ ಮಾಡಿದ ಅಧಿಕಾರಾವಧಿಯ ವಿಸ್ತರಣೆಯು ಕಾನೂನುಬಾಹಿರ ಮತ್ತು 2021ರಲ್ಲಿ ಅದರ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು. ಆದಾಗ್ಯೂ, ಸುಗಮ ವರ್ಗಾವಣೆಗೆ ಅವಕಾಶ ನೀಡಲು ಜುಲೈ 31ರವರೆಗೆ ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಅನುಮತಿ ನೀಡಿತು. ಇದನ್ನೂ ಓದಿ: ವಾಟ್ಸಪ್ ಸ್ಟೇಟಸ್ ಜವಾಬ್ದಾರಿಯುತವಾಗಿ ಹಾಕಿ – ಬಾಂಬೆ ಹೈಕೋರ್ಟ್

ಈ ನಡುವೆ ಇಡಿ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿತ್ತು. ಎಫ್‌ಎಟಿಎಫ್ ಪರಿಶೀಲನೆಯು ನಿರ್ಣಾಯಕ ಹಂತದಲ್ಲಿದೆ. ಜುಲೈ 21, 2023 ರಂದು ಪರಿಣಾಮಕಾರಿತ್ವದ ಕುರಿತು ಸಲ್ಲಿಕೆಗಳನ್ನು ಮಾಡಲಾಗಿದೆ. ನವೆಂಬರ್ 2023ರಲ್ಲಿ ಆನ್-ಸೈಟ್ ಭೇಟಿಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆ ಅವರ ಅಗತ್ಯವಿದೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿತ್ತು. ಇದನ್ನೂ ಓದಿ: ಜ್ಞಾನವ್ಯಾಪಿ ಮಸೀದಿ ಸರ್ವೆಗೆ ತಾತ್ಕಾಲಿಕ ತಡೆ ನೀಡಿದ ಸುಪ್ರೀಂಕೋರ್ಟ್

ಈ ಹಿನ್ನೆಲೆ ಸಂಜಯ್ ಕುಮಾರ್ ಮಿಶ್ರಾ ಅವರನ್ನು ಅಕ್ಟೋಬರ್ 15ರವರೆಗೆ ಕಚೇರಿಯಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ವಾದಿಸಿತ್ತು. ಸರ್ಕಾರದ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರ ಪೀಠವು ಸೆಪ್ಟೆಂಬರ್ 15 ರವರೆಗೆ ಹುದ್ದೆಯಲ್ಲಿ ಮುಂದುವರಿಸಲು ಅನುಮತಿ ನೀಡಿದೆ. ಇದನ್ನೂ ಓದಿ: 5 ವರ್ಷಗಳಲ್ಲಿ ಕಾನೂನು ಹೋರಾಟಕ್ಕೆ ಕೇಂದ್ರ ಖರ್ಚು ಮಾಡಿದ್ದೆಷ್ಟು?

Web Stories

Share This Article