ನವದೆಹಲಿ: ಜ್ಞಾನವಾಪಿ ಮಸೀದಿ (Gnanavapi Temple) ಯಲ್ಲಿ ಪತ್ತೆಯಾದ ಶಿವಲಿಂಗ (Shivalinga) ರೂಪದ ಆಕೃತಿಯನ್ನು ರಕ್ಷಿಸುವ ಆದೇಶವನ್ನು ವಿಸ್ತರಿಸಬೇಕು ಎಂದು ಸುಪ್ರೀಂಕೋರ್ಟ್ (Supreme Court) ಗೆ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಮನವಿ ಮಾಡಿದರು. ಇಂದು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಿಷಯ ಪ್ರಸ್ತಾಪಿಸಿದರು.
Advertisement
ಪತ್ತೆಯಾದ ಆಕೃತಿಯ ರಕ್ಷಿಸುವ ಆದೇಶವು ನವೆಂಬರ್ 12 ರಂದು ಮುಕ್ತಾಯಗೊಳ್ಳಲಿದೆ. ಈ ಹಿನ್ನಲೆ ಈ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮುಸ್ಲಿಂ ಪಕ್ಷಗಳು ಸಲ್ಲಿಸಿದ ಆದೇಶ 7 ನಿಯಮ 11 ದೂರುಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ತಿಳಿಸಿದರು. ವಾದ ಆಲಿಸಿದ ಸಿಜೆಐ ಡಿವೈ ಚಂದ್ರಚೂಡ್ ನಾಳೆ ಮಧ್ಯಾಹ್ನ ಮೂರು ಗಂಟೆಗೆ ಈ ಬಗ್ಗೆ ವಿಚಾರಣೆ ನಡೆಸಲಾಗುವುದು, ಇದಕ್ಕಾಗಿ ಪೀಠವೊಂದನ್ನು ರಚನೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮುಕುಡಪ್ಪ, ಪುಟ್ಟಸ್ವಾಮಿ ವಿರುದ್ಧ ಸಿದ್ದರಾಮಯ್ಯ ಬೆಂಬಲಿಗರ ಆಕ್ರೋಶ – ಮನೆ ಬಾಗಿಲು, ಗೇಟ್ ತಳ್ಳಿ ನುಗ್ಗೋ ಯತ್ನ
Advertisement
Advertisement
ಜ್ಞಾನವಾಪಿ ಮಸೀದಿಯ ಆವರಣದ ಸಮೀಕ್ಷೆಯ ಸಮಯದಲ್ಲಿ ಕಂಡುಬಂದ ವಸ್ತುವು ಶಿವಲಿಂಗವೇ? ಅಥವಾ ನೀರಿನ ಕಾರಂಜಿಯೋ ಎನ್ನುವ ಬಗ್ಗೆ ಒಂದು ವೈಜ್ಞಾನಿಕ ತನಿಖೆಯನ್ನು ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‍ಐ) ನಿರ್ದೇಶನಗಳನ್ನು ಕೋರಿ ಹಿಂದೂ ಪಕ್ಷಗಳು ಸಲ್ಲಿಸಿದ ಮನವಿಯನ್ನು ಕಳೆದ ತಿಂಗಳು ವಾರಣಾಸಿ ಜಿಲ್ಲಾ ನ್ಯಾಯಾಲಯ (Varanasi District Judge) ವು ತಿರಸ್ಕರಿಸಿತು. ಈ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ (Alahabad HighCourt) ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
Advertisement
ವಿವಾದಿತ ವಸ್ತುವಿನ ವಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್, ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್), ಉತ್ಖನನ ಮತ್ತು ಇತರ ವಿಧಾನಗಳಿಂದ ವಸ್ತುವಿಗೆ ಹಾನಿಯಾಗುತ್ತದೆಯೇ ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಸಲ್ಲಿಸುವಂತೆ ಹೈಕೋರ್ಟ್ ಕಳೆದ ವಾರ ಎಎಸ್‍ಐ ಮಹಾನಿರ್ದೇಶಕರನ್ನು ಕೇಳಿದೆ.