500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

Public TV
1 Min Read
belagavi police

ಬೆಳಗಾವಿ: ಮಸೀದಿಗಳಲ್ಲಿ ಅಜಾನ್ ಶಬ್ದದ ಕಿರಿಕಿರಿ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಇಂದಿನಿಂದ ರಾಜ್ಯಾದ್ಯಂತ ಅಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಸುಪ್ರಭಾತ, ಚಾಲಿಸಾ ಪಠಣ ಹಿನ್ನೆಲೆ ಬೆಳಗಾವಿಯಲ್ಲಿ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಇಂದು ಬೆಳಗ್ಗೆ 5ಕ್ಕೆ ಬೆಳಗಾವಿ ನಗರದ ಆರ್‌ಟಿಓ ವೃತ್ತದ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಹನುಮಾನ್ ದೇವರ ಮೂರ್ತಿಗೆ ಆರತಿ ಮಾಡಿ, ಹನುಮಾನ ಚಾಲೀಸಾ ಪಠಣ ಮಾಡಿ ಸ್ಪೀಕರ್ ನಲ್ಲಿ ಭಜನೆ ಹಾಡು ಹಾಕಿದರು.

loud speaker temple mysuru

ಹೀಗೆ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ಭಜನೆ, ಹನುಮಾನ್ ಚಾಲೀಸಾ, ಮಂತ್ರ ಪಠಣ ಇಂದಿನಿಂದ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಳಗಾವಿ ನಗರದ ನೂರು, ಜಿಲ್ಲೆಯ 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರಿಂದ ತೀವ್ರ ಭದ್ರತೆ ವಹಿಸಲಾಗಿದೆ. ಇದನ್ನೂ ಓದಿ: ಪ್ರಸಿದ್ಧ ಸಿದ್ಧಾರೂಢ ಮಠದಲ್ಲಿ ಇಂದಿನ ವಿಶೇಷ ಪೂಜೆಯ ಜೊತೆಗೆ ಮಂತ್ರಘೋಷ

belagavi temple

ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಸೀದಿಗಳಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಿಯವರೆಗೆ ಪಾಲನೆ ಮಾಡೊದಿಲ್ಲವೋ ಅಲ್ಲಿಯವರೆಗೆ ನಮ್ಮ ಅಭಿಯಾನ ಮುಂದುವರಿಸುತ್ತೇವೆ ಎಂದು ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಹೇಳಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಕಾನೂನಾತ್ಮಕ ಹೋರಾಟ: ಪ್ರಮೋದ್ ಮುತಾಲಿಕ್

Share This Article
Leave a Comment

Leave a Reply

Your email address will not be published. Required fields are marked *