ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಖಂಡಿಸಿ 180ಕ್ಕೂ ಹೆಚ್ಚು ಶೋಷಿತ ಸಮುದಾಯಗಳನ್ನ ಒಳಗೊಂಡ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಇಂದು ರಾಜಭವನ ಚಲೋ (Raj Bhavan Chalo) ಮೂಲಕ ಪ್ರತಿಭಟನೆಗೆ (Protest) ಮುಂದಾಗಿವೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು ಬೆಂಗಳೂರಿಗರಿಗೆ ಪ್ರತಿಭಟನೆ ಬಿಸಿ ತಟ್ಟಲಿದೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಕಾಲ್ನಡಿಗೆ ಮೂಲಕ ಫ್ರೀಡಂ ಪಾರ್ಕ್‌ಗೆ (Freedom Park) ಪ್ರತಿಭಟನಕಾರರ ಜಾಥಾ ಬರಲಿದ್ದು, ಸುತ್ತಮುತ್ತ ಟ್ರಾಫಿಕ್ ಜಾಮ್ (Traffic Jam) ಆಗಲಿದೆ.
Advertisement
ಮೆಜೆಸ್ಟಿಕ್ ಸುತ್ತಮುತ್ತ, ಗಾಂಧಿ ನಗರ ರಸ್ತೆ, ಶೇಷಾದ್ರಿ ರಸ್ತೆ, ಕೆ ಆರ್ ಸರ್ಕಲ್, ವಿಧಾನಸೌಧ, ಸುತ್ತಮುತ್ತ ಭಾರೀ ವಾಹನ ದಟ್ಟನೆಯಾಗುವ ಸಾಧ್ಯತೆಯಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ವಾಹನಗಳಲ್ಲಿ ಪ್ರತಿಭಟಕಾರರು ಬರುತ್ತಿರುವ ಹಿನ್ನೆಲೆ ಪ್ರಮುಖವಾಗಿ ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಈ ಮಾರ್ಗದ ಮೂಲಕ ಸಂಪರ್ಕ ಒದಗಿಸುವ ನಗರದ ಒಳಭಾಗದ ರಸ್ತೆಗಳಲ್ಲಿ ಟ್ರಾಫಿಕ್ ಬಿಸಿ ತಟ್ಟಲಿದೆ. ಇದನ್ನೂ ಓದಿ: ವೇಶ್ಯ ಗೃಹಕ್ಕೆ ಹೋಗಿದ್ದ, ಗರ್ಲ್‌ಫ್ರೆಂಡ್‌ಗೆ ಬೆತ್ತಲೆ ಫೋಟೋ ಕಳಿಸುವಂತೆ ಕೇಳಿದ್ದ – ರೇಪ್ ಆರೋಪಿಯ ಕರಾಳ ಮುಖ ಬಯಲು
Advertisement
Advertisement
ಬೇರೆ ಜಿಲ್ಲೆಗಳಿಂದ ನೂರಾರು ಬಸ್ಸುಗಳಲ್ಲಿ ಪ್ರತಿಭಟನಕಾರರು ಬರುತ್ತಿದ್ದು ಈ ಎಲ್ಲಾ ಬಸ್ಸುಗಳನ್ನು ನಿಲ್ಲಿಸಲು ಅರಮನೆ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಣ ಸಂಬಂಧ ಸದ್ಯ ಪೊಲೀಸರು ಫ್ರೀಡಂ ಪಾರ್ಕ್ ರಸ್ತೆಯಿಂದ ಖೋಡೆ ಸರ್ಕಲ್ ಬಳಸುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಕೆಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಮತ್ತೆ ರಷ್ಯಾ ವಾರ್ – 100 ಕ್ಷಿಪಣಿ, 100 ಅಟ್ಯಾಕಿಂಗ್ ಡ್ರೋನ್‌ಗಳಿಂದ ದಾಳಿ
Advertisement
ಎಲ್ಲೆಲ್ಲಿ ತಟ್ಟಲಿದೆ ಟ್ರಾಫಿಕ್ ಬಿಸಿ?
ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ರಸ್ತೆ, ಗೂಡ್‌ಶೆಡ್ ರೋಡ್, ಓಕಳಿಪುರಂ ರಸ್ತೆ, ಮೈಸೂರು ರಸ್ತೆ, ಶೇಷಾದ್ರಿ ರಸ್ತೆ, ಮೌರ್ಯ ಸರ್ಕಲ್, ಚಾಲುಕ್ಯ ಸರ್ಕಲ್, ಸಿಐಡಿ ರಸ್ತೆ, ಕೆ.ಆರ್ ಸರ್ಕಲ್, ಕಾರ್ಪೊರೇಷನ್ ಸರ್ಕಲ್, ವಿಧಾನಸೌಧ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್, ಏರ್‌ಪೋರ್ಟ್ ರೋಡ್, ತುಮಕೂರು ರಸ್ತೆ.