ಬೆಂಗಳೂರು: ಹಾಸಿಗೆ ಹಿಡಿದಿರೋ ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ವಿರುದ್ಧ ಸಿಸಿಬಿಗೆ ದೂರು ನೀಡಲಾಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಮುತ್ತಪ್ಪ ರೈ ಅವರ ವಿರುದ್ಧ ಅವರ ಬೆಂಬಲಿಗ ರಾಕೇಶ್ ಮಲ್ಲಿ ಸಿಸಿಬಿಗೆ ದೂರು ನೀಡಿದ್ದಾರೆ. ಈ ದೂರು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಮುತ್ತಪ್ಪ ರೈ ಆಸ್ತಿ ಮೇಲೆ ಕಣ್ಣಿಟ್ಟಿದ್ದಾರಾ ಅವರ ಬೆಂಬಲಿಗರು ಎಂಬ ಅನುಮಾನ ಕೂಡ ಹುಟ್ಟುಕೊಂಡಿದೆ. ಇದನ್ನೂ ಓದಿ: ನನಗೆ ಕ್ಯಾನ್ಸರ್ ಇರುವುದು ನಿಜ, ಟಿಕೆಟ್ ಕನ್ಫರ್ಮ್ ಆಗಿದೆ: ಮುತ್ತಪ್ಪ ರೈ
Advertisement
Advertisement
ಆಸ್ತಿ ಮತ್ತು ಹಣದ ವಿಚಾರವಾಗಿ ರೈ ಮೋಸ ಮಾಡಿದ್ದಾರೆ. ಇದನ್ನ ಕೇಳಿದರೆ ಕೊಲೆ ಬೆದರಿಕೆ ಹಾಕ್ತಿದ್ದಾರೆ ಎಂದು ರಾಕೇಶ್ ದೂರು ನೀಡಿದ್ದಾರೆ. ಹಾಸಿಗೆ ಹಿಡಿದ ಮೇಲೆ ಆಸ್ತಿಯನ್ನು ಹಂಚಿಕೆ ಮಾಡಿರುವ ರೈ ತನ್ನ ಬೆಂಬಲಿಗರ ಹೆಸರಿಗೂ ಆಸ್ತಿ ಬರೆದಿದ್ದಾರೆ. ಆದರೆ ಹಲವು ವರ್ಷದಿಂದ ರೈ ಜೋತೆಗೆ ಇದ್ದ ರಾಕೇಶ್‍ರಿಗೆ ಯಾವುದೇ ಆಸ್ತಿ ಕೊಟ್ಟಿಲ್ಲ ಎನ್ನಲಾಗುತ್ತಿದೆ. ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡು ರಾಕೇಶ್ ಸಿಸಿಬಿಗೆ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಶಸ್ತ್ರಾಸ್ತ್ರಗಳನ್ನಿಟ್ಟು ಆಯುಧ ಪೂಜೆ- 8 ಗಂಟೆ ಕಾಲ ಮುತ್ತಪ್ಪ ರೈಗೆ ಸಿಸಿಬಿ ಡ್ರಿಲ್..!
Advertisement
Advertisement
ಮುತ್ತಪ್ಪ ರೈ ಆರೋಗ್ಯದ ಬಗ್ಗೆ ಕಳೆದ ಹಲವು ತಿಂಗಳುಗಳಿಂದ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದವು. ಮುತ್ತಪ್ಪ ರೈಗೆ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದಾರೆ ಬದುಕುವುದು ಖಚಿತವಿಲ್ಲ. ಸ್ವಲ್ಪ ದಿನ ಮಾತ್ರ ಬದುಕಿರುತ್ತಾರೆ ಎಂದು ಸಾಕಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದವು. ಇದನ್ನೂ ಓದಿ: ಮುತ್ತಪ್ಪ ರೈ ಹೆಸರಲ್ಲಿ ಕಿಡ್ನಾಪ್ ಮಾಡಿದ ರೌಡಿಶೀಟರ್ ಕೋರ್ಟಿಗೆ ಶರಣು
ಈ ಹಿನ್ನೆಲೆ ಜನವರಿ ತಿಂಗಳಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಮುತ್ತಪ್ಪ ರೈ ಅವರು, ನನಗೆ ಕ್ಯಾನ್ಸರ್ ಇರುವುದು ನಿಜ. ಕಳೆದ ಮೂರು ತಿಂಗಳ ಹಿಂದೆ ಕುಕ್ಕೆಗೆ ಹೋಗಿ ಬರುವಾಗ ಬೆನ್ನು ನೋವು ಕಾಣಿಸಿಕೊಂಡಿತ್ತು. ವೈದ್ಯಕೀಯ ಪರೀಕ್ಷೆಗೆ ಹೋಗಿದ್ದಾಗ ವೈದ್ಯರು ನಿಮಗೆ ಕ್ಯಾನ್ಸರ್ ಇದ್ದು, ಲಿವರ್ ತನಕ ಹರಡಿದೆ. ಬದುಕುವುದು ಬಹುತೇಕ 15 ದಿನಗಳು ಅಷ್ಟೇ ಎಂದು ತಿಳಿಸಿದ್ದರು. ಚಿಕಿತ್ಸೆಗಾಗಿ ದೆಹಲಿಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಇಪ್ಪತ್ತು ದಿನದಲ್ಲಿ ಶೇ. 90ರಷ್ಟು ಸುಧಾರಿಸಿದ್ದೆ. ನಂತರ ಮತ್ತೊಂದು ಚೆಕಪ್ ಮಾಡಿದಾಗ ಕ್ಯಾನ್ಸರ್ ಬ್ರೈನ್ ತನಕ ಹರಡಿತ್ತು. ಬಳಿಕ ವೈದ್ಯರು ನೀಡಿದ ಚಿಕಿತ್ಸೆ ಹಾಗೂ ನನ್ನ ವಿಲ್ ಪವರ್ ನಿಂದ ಇಂದು ಕ್ಯಾನ್ಸರ್ ವಿರುದ್ಧ ಜಯಸಿದ್ದು ಆರಾಮಾಗಿ ಬದುಕಿದ್ದೇನೆ ಎಂದಿದ್ದರು.