ಬೀದರ್: ಪ್ರಧಾನಿ ಮೋದಿ ಸರ್ಕಾರದ ನೋಟ್ ಬ್ಯಾನ್ ಬೆಂಬಲಿಸಿ ನಗರದ ವರ್ತಕರೊಬ್ಬರು ರಂಜಾನ್ ಹಬ್ಬದ ಪ್ರಯುಕ್ತವಾಗಿ 10 ಪೈಸೆಗೆ ಒಂದು ಸೀರೆಯನ್ನ ಮಾರಾಟ ಮಾಡುತ್ತಿದ್ದಾರೆ.
Advertisement
ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಸೀರೆಗಳನ್ನು ಕೊಳ್ಳಲು ಕೇವಲ ಹಳೆಯ 10, 25 ಮತ್ತು 50 ಪೈಸೆಯ ನಾಣ್ಯಗಳನ್ನು ನೀಡಿದರೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
Advertisement
Advertisement
ಮೋದಿಯವರು ನೋಟ್ ಬ್ಯಾನ್ ಮಾಡಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅದರ ಪ್ರಯುಕ್ತವಾಗಿ ನಾನು ಸೀರೆಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡ್ತಾಯಿದ್ದೀನಿ. ಫ್ರೀಯಾಗಿ ನೀಡಿದ್ರೆ ಜನ ತೆಗೆದುಕೊಳ್ಳಲು ಮುಂದೆ ಬರಲ್ಲ. ಅದಕ್ಕಾಗಿ ಒಂದು ಸೀರೆಗಾಗಿ 10 ಪೈಸೆಯನ್ನು ನಿಗದಿ ಮಾಡಲಾಗಿದೆ. ಇದು ವಿಶೇಷವಾಗಿ ರಂಜಾನ್ ಹಬ್ಬಕ್ಕಾಗಿ ಈ ಆಫರ್‍ನ್ನು ಕೊಡಲಾಗಿದೆ ಎಂದು ಅಂಗಡಿಯ ಮಾಲೀಕ ಚಂದ್ರಶೇಖರ್ ಪರಸಂಗಿ ಹೇಳಿದ್ದಾರೆ.
Advertisement
10 ಪೈಸೆ ಯಾಕೆ? 10 ಪೈಸೆ ಬಹಳಷ್ಟು ಮಂದಿಯ ಜೊತೆಗೆ ಇಲ್ಲದ ಕಾರಣ ಮಾಲೀಕರು ಈ ಆಫರ್ ಇಟ್ಟಿದ್ದಾರೆ. ಆದರೆ ಒಂದು ರೂ. ನೀಡಿ 10 ಸೀರೆಯನ್ನು ಪಡೆಯಲು ಸಾಧ್ಯವಿಲ್ಲ.
ಸೀರೆ ಖರೀದಿಸಲು ಮಹಿಳೆಯರು ಬೆಳಗ್ಗೆಯಿಂದ ಬಿಸಿಲನ್ನು ಲೆಕ್ಕಿಸದೇ ಸರತಿ ಸಾಲಿನಲ್ಲಿ ನಿಂತು ಸೀರೆ ಖರೀದಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದಾರೆ. ಇತ್ತ ಪುರುಷರು ತಮ್ಮ ಪತ್ನಿಯರಿಗಾಗಿ 10 ಪೈಸೆ ನೀಡಿ ಸೀರೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಮಂಗಳವಾರದಿಂದ ಈ ವಿಶೇಷ ಆಫರ್ ಪ್ರಾರಂಭವಾಗಿದ್ದು, ಜುಲೈ 15ರವರೆಗೂ ನಿಮಗೆ ನಗರದ ದೃಷ್ಟಿ-ಸೃಷ್ಟಿ ಸ್ಯಾರಿ ಸೆಂಟರ್‍ನಲ್ಲಿ 10 ಪೈಸೆಗೊಂದು ಸೀರೆ ಸಿಗಲಿದೆ. ಕೆಲವು ತಿಂಗಳ ಹಿಂದೆ ಇದೇ ಚಂದ್ರಶೇಖರ್ 20 ರೂ.ಗೆ ಒಂದು ಸೀರೆಯನ್ನು ಮಾರಾಟ ಮಾಡಿದ್ದರು.