ನವದೆಹಲಿ: ಭಾರತೀಯ ನ್ಯಾಯ ಸಂಹಿತೆಯಲ್ಲಿರುವ ಕಠಿಣ ಕಾನೂನು ವಿರೋಧಿಸಿ ಟ್ರಕ್ ಚಾಲಕರು (Truck Drivers) ದೇಶಾದ್ಯಂತ ಪ್ರತಿಭಟನೆಗೆ (Protest) ಧುಮುಕಿದ್ದಾರೆ.
ಟ್ರಕ್ ಮಾಲೀಕರ ಸಂಘ ಪ್ರತಿಕ್ರಿಯಿಸಿ,ನಾವು ಈ ಪ್ರತಿಭಟನೆಗೆ ಕರೆಕೊಟ್ಟಿಲ್ಲ. ಚಾಲಕರೇ ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಧುಮುಕಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಹುಣಸೂರಿನಲ್ಲಿ KSRTC ಬಸ್, ಜೀಪ್ ನಡುವೆ ಅಪಘಾತ – ನಾಲ್ವರ ದುರ್ಮರಣ
Advertisement
Advertisement
ಪ್ರತಿಭಟನೆ ಯಾಕೆ?
ಈ ಮೊದಲು ಹಿಟ್ ಆಂಡ್ ರನ್ ಪ್ರಕರಣದ (Hit and Run) ಆರೋಪ ಸಾಬೀತಾದರೆ ಐಪಿಸಿ ಅಡಿ ಚಾಲಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.
Advertisement
ಈಗ ಹೊಸದಾಗಿ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಅಡಿಯಲ್ಲಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ದಂಡದ ಜೊತೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
Advertisement
ಈ ಶಿಕ್ಷೆಯ ಪ್ರಮಾಣ ಬಹಳ ಹೆಚ್ಚಾಯಿತು. ಇದರಿಂದಾಗಿ ಮುಂದೆ ಚಾಲಕ ವೃತ್ತಿ ಜನ ಬರುವುದು ಕಡಿಮೆಯಾಗಬಹುದು. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.