ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ (Pehalgam Terrorist Attack) ಮೆರೆದಿದ್ದು, ಸುಮಾರು 28 ಪ್ರವಾಸಿಗರು ಉಗ್ರರ ದಾಳಿಗೆ ಸಾವನ್ನಪ್ಪಿದ್ರು. ಇದರ ಎಫೆಕ್ಟ್ ನಿಂದಾಗಿ ಕಾಶ್ಮೀರದಿಂದ ಬೆಂಗಳೂರಿಗೆ ಬರಬೇಕಾಗಿದ್ದ ಡ್ರೈಫ್ರೂಟ್ಸ್ (Dry Fruits) ಹಾಗೂ ಹಣ್ಣುಗಳ ಸರಬರಾಜಿನಲ್ಲಿ ಕೆಲವೆಡೆ ವ್ಯತ್ಯಯವಾಗ್ತಿದೆ.
ಕಾಶ್ಮೀರ ಭೂ ಲೋಕದ ಸ್ವರ್ಗ.., ಹಿಮನದಿಗಳ ಭೂಸಿರಿಯಂತಲೇ ಫೇಮಸ್ ಆಗಿದೆ. ಕೇವಲ ಪ್ರಕೃತಿ ಸೌಂದರ್ಯಕ್ಕೆ ಮಾತ್ರವಲ್ಲ, ಮಸಾಲೆ ಪದಾರ್ಥಗಳು, ಡ್ರೈ ಫ್ರೂಟ್ಸ್ ಹಾಗೂ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಕಾಶ್ಮೀರದಿಂದ ದೇಶದ ನಾನಾ ಭಾಗಗಳಿಗೆ ಡ್ರೈಫ್ರೂಟ್ಸ್‌ಗಳು ಸರಬರಾಜು ಆಗ್ತಿದ್ದವು. ಆದ್ರಲ್ಲೂ ಶ್ರೀನಗರ, ಜಮ್ಮು ಹಾಗೂ ಪಹಲ್ಗಾಮ್ ನಿಂದ ಒಣಹಣ್ಣುಗಳು ಪೂರೈಕೆಯಾಗ್ತಿದ್ದವು. ಅದ್ಯಾವಾಗ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದ್ರೋ.. ಅಲ್ಲಿಂದ ಭಾರತ ಆಮದು-ರಪ್ತುಗಳ ವಿಚಾರದಲ್ಲಿ ಕಡಿವಾಣ ಹಾಕಿದೆ. ಇದರಿಂದ ಭಾರತದ ವಿವಿಧೆಡೆಗೆ ಬರುತ್ತಿದ್ದ ಕೆಲ ಡ್ರೈಫ್ರೂಟ್ಸ್ ಹಣ್ಣಗಳ ಬೆಲೆ ಗಗನಕ್ಕೇರಿದೆ.
ಹಾಗಿದ್ರೆ.., ಯಾವೆಲ್ಲ ಡ್ರೈಫ್ರೂಟ್ಸ್‌ಗಳ ಬೆಲೆ ದುಬಾರಿಯಾಗಲಿದೆ.. ಅವುಗಳ ಜೊತೆ ಬೇರೆ ವಸ್ತುಗಳು ಗಗನಕ್ಕೇರುವ ಸಾಧ್ಯತೆಗಳಿವೆ ಅನ್ನೋದರ ಡಿಟೇಲ್ಸ್ ಇಲ್ಲಿದೆ. ಇದನ್ನೂ ಓದಿ: ಭಾರತ ಹಿಂದೂಗಳಂತೆ ಮುಸ್ಲಿಮರಿಗೂ ಸೇರಿದೆ – ಪಹಲ್ಗಾಮ್ ದಾಳಿ ಬಗ್ಗೆ ರಾಖಿ ಸಾವಂತ್ ಮಾತು
ಯಾವೆಲ್ಲಾ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಸಾಧ್ಯತೆ?
ಪಾಕ್‌ನಿಂದ ಭಾರತಕ್ಕೆ ಆಮದು ಆಗ್ತಿದ್ದ ಡ್ರೈಫ್ರೂಟ್ಸ್ ಪೈಲಿ ಬಾದಾಮಿ, ಗೋಡಂಬಿ, ಪಿಸ್ತಾ, ಕರ್ಜೂರ, ಒಣದ್ರಾಕ್ಷಿ, ವಾಲ್‌ನಟ್ಸ್, ಒಣ ಅಪ್ರಿಕಾಟ್‌ಗಳೂ ದುಬಾರಿಯಾಗುವ ಸಾಧ್ಯತೆಗಳಿವೆ. ಇದರೊಂದಿಗೆ ಜೊತೆಗೆ ಕಲ್ಲು ಉಪ್ಪು, ಕನ್ನಡಕದಲ್ಲಿ ಬಳಸಲಾಗುವ ಆಪ್ಟಿಕಲ್ ಲೆನ್ಸ್, ಗೋಧಿ, ಅಕ್ಕಿ, ದ್ವಿದಳ ಧಾನ್ಯಗಳು, ಸಿಮೆಂಟ್ ಕಲ್ಲು, ಸುಣ್ಣ, ಹತ್ತಿ, ಉಕ್ಕು, ಚರ್ಮದ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನು, 20-25 ತರಹದ ಒಣಹಣ್ಣುಗಳು ಕಾಶ್ಮೀರದಿಂದ ಬೆಂಗಳೂರಿಗೆ ಬರುತ್ತಿದ್ದವು. ಇದೀಗ ಆಮದು ಬಂದ್ ಆಗಿರೋದ್ರಿಂದ ಗ್ರಾಹಕರ ಡಿಮ್ಯಾಂಡ್ ಹೆಚ್ಚಾಗಿದ್ದು, ಪೂರೈಕೆಯಲ್ಲಿ ವ್ಯತ್ಯಾಯವಾಗಿದೆ. ಹೀಗೆ ಮುಂದುವರೆದ್ರೇ ಬೆಲೆ ಏರಿಕೆಯಾಗಲಿದೆ ಅಂತಾರೆ ಡ್ರೈ ಪ್ರೂಟ್ಸ್ ವ್ಯಾಪಾರಿಗಳು. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!