ಬೆಂಗಳೂರು: ಪೋಸ್ಟ್ ಮೂಲಕ ಡ್ರಗ್ಸ್ (Drugs ) ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ (CCB) ಪೊಲೀಸರು ಬಂಧಿಸಿ 6.50 ಲಕ್ಷ ಮೌಲ್ಯದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ.
ರಿತಿಕ್ ರಾಜ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪಿ. ಜಾರ್ಖಂಡ್‌ನಿಂದ ನಗರಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದನು. ಪೋಸ್ಟ್ ಮೂಲಕ ನಗರದ ವಿವಿಧ ಭಾಗಗಳಿಗೆ ಡ್ರಗ್ಸ್ ಸರಬರಾಜು ಮಾಡಲಾಗುತಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ
ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬರುತ್ತಿದ್ದ ಪೋಸ್ಟ್ ಅನ್ನು ಟ್ರ್ಯಾಪ್ ಮಾಡಿದ್ದಾರೆ. ಬಳಿಕ ಪೋಸ್ಟ್ ಡೆಲಿವರಿ ಆಗುವ ಜಾಗದಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗಿಫ್ಟ್ ಬಾಕ್ಸ್ ರೂಪದಲ್ಲಿ ನಗರಕ್ಕೆ ಚರಸ್ ಡ್ರಗ್ಸ್ನ ಕಳುಹಿಸಲಾಗಿತ್ತು. ನಂತರ ಬಂದಿದ್ದ ಬಾಕ್ಸ್ಗಳನ್ನು ಆರೋಪಿಯಿಂದಲೇ ಪೊಲೀಸರು ತೆಗೆಸಿದ್ದಾರೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಪಿಎ ಹೆಸರು ಹೇಳಿ ಧೋನಿ ಮ್ಯಾನೇಜರ್‌ಗೆ ಲಕ್ಷ ಲಕ್ಷ ವಂಚನೆ
ಬಾಕ್ಸ್ ತೆಗೆದು ನೋಡಿದ ಸುಮಾರು 6.50 ಲಕ್ಷ ಮೌಲ್ಯದ 130 ಗ್ರಾಂ ಚರಸ್ ಪತ್ತೆಯಾಗಿದೆ. ಇವುಗಳನ್ನು ಋಷಿಕೇಶದಿಂದ ಪೋಸ್ಟ್ ಮೂಲಕ ಕಳುಹಿಸಲಾಗಿತ್ತು. ಕೇರಳ ಮೂಲದ ಆರೋಪಿ ಅದಿತ್ ಸರ್ವೋತ್ತಮ್ ಎಂಬವನು ಪಾರ್ಸೆಲ್ ಮಾಡಿದ್ದನು. ಸದ್ಯ ಅದಿತ್ ತಲೆಮರೆಸಿಕೊಂಡಿದ್ದು ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್‌ಗೆ ಹಂದಿ ಜ್ವರ & ಕೋವಿಡ್ ಪಾಸಿಟಿವ್