ಚೆನ್ನೈ: ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ ಸಹಾಯ ಹಸ್ತವನ್ನು ಚಾಚಿದ್ದಾರೆ.
ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‍ನಿಂದ ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್ ಅವರು ನೆರೆ ಸಂತ್ರಸ್ತರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Advertisement
Advertisement
ರಜನಿಕಾಂತ್ ಅವರು ಇಂದು ತಮ್ಮ ಕಚೇರಿಯಲ್ಲಿ ನೆರೆ ಸಂತ್ರಸ್ತರಿಗೆ ಮನೆಯ ಹಕ್ಕು ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ರಜನಿಕಾಂತ್ ಸಂತ್ರಸ್ತರಿಗೆ ಮನೆಯ ಪತ್ರಗಳನ್ನು ನೀಡುತ್ತಿರುವ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರ ಈ ಕೆಲಸ ನೋಡಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇತ್ತೀಚೆಗೆ ತಮ್ಮನ್ನು ಹೀರೋ ಮಾಡಿದ ನಿರ್ಮಾಪಕರಿಗೆ ಒಂದು ಕೋಟಿ ಮೌಲ್ಯದ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು. ರಜನಿಕಾಂತ್ ಮೊದಲ ಬಾರಿಗೆ 1978ರಲ್ಲಿ `ಭೈರವಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾವೂ ಸೂಪರ್ ಹಿಟ್ ಆಗಿದ್ದು, ನಿರ್ಮಾಪಕ ಕಲೈಜ್ಞಾನಂ ಚಿತ್ರವನ್ನು ನಿರ್ಮಿಸಿದ್ದರು. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದರೂ ಕಲೈಜ್ಞಾನಂ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗಾಗಿ ರಜನಿಕಾಂತ್ ನಿರ್ಮಾಪಕರಿಗೆ ಮನೆಯನ್ನು ಗಿಫ್ಟ್ ಆಗಿ ನೀಡಿದ್ದರು.