‘ಜೈಲರ್’ (Jailer) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಬೆಂಗಳೂರಿಗೆ (Bengaluru) ತಲೈವಾ ಭೇಟಿ ನೀಡಿದ್ದಾರೆ. ಚಿತ್ರರಂಗಕ್ಕೆ ಬರುವ ಮುನ್ನ ಕಾರ್ಯ ನಿರ್ವಹಿಸಿದ್ದ ಜಯನಗರ ಡಿಪೋಗೆ ತಲೈವಾ ಸರ್ಪ್ರೈಸ್ ವಿಸಿಟ್ ನೀಡಿದ್ದಾರೆ. ಕಂಡೆಕ್ಟರ್- ಡ್ರೈವರ್ ಜೊತೆ ತಲೈವಾ ಮಾತುಕತೆ ನಡೆಸಿದ್ದಾರೆ. ಈ ಕುರಿತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಮೈಸೂರು ದಸರಾ ಉದ್ಘಾಟಿಸಲಿದ್ದಾರೆ ನಾದಬ್ರಹ್ಮ ಹಂಸಲೇಖ
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಬೆಂಗಳೂರಿಗೆ ಬಂದಿದ್ದಾರೆ. ಸಾಕಷ್ಟು ವರ್ಷಗಳ ರಜನಿಕಾಂತ್ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರು ಜೀವನಕ್ಕೂ ತಲೈವಾಗೂ ನಂಟಿದೆ. ಚಿತ್ರರಂಗಕ್ಕೆ ಬರುವ ಮುನ್ನ ಜಯನಗರದ ಡಿಪೋದಲ್ಲಿ (Jayanagara Bus Depo)ಕಂಡೆಕ್ಟರ್ ಆಗಿ ತಲೈವಾ ಕಾರ್ಯ ನಿರ್ವಹಿಸಿದ್ದರು. ಈ ಅಲ್ಲಿಗೆ ಸರ್ಪ್ರೈಸ್ ವಿಸಿಟ್ ನೀಡಿ, ಕಂಡೆಕ್ಟರ್- ಡ್ರೈವರ್ ಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಸುಮಾರು ಹತ್ತು ನಿಮಿಷಗಳ ಕಾಲ ನಟ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಭೇಟಿಗೆ ಚಾಲಕರು ಶಾಕ್ ಆಗಿದ್ದಾರೆ.
ಬೆಂಗಳೂರಿನ (Bengaluru) ಜಯನಗರ ಡಿಪೋಗೆ ಭೇಟಿ ನೀಡಿ ಹಳೆಯ ನೆನಪನ್ನ ನಟ ಸ್ಮರಿಸಿದ್ದರು. ವೈಟ್ & ವೈಟ್ ಧರಿಸಿನಲ್ಲಿ ತಲೈವಾ ಮಿಂಚಿದ್ದರು. ರಜನಿಕಾಂತ್ ಅವರನ್ನ ನೋಡಿ ಖುಷಿಯಲ್ಲಿ ಸಿಬ್ಬಂದಿಗಳು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ತಲೈವಾ ಭೇಟಿ ಜಯನಗರದ ಚಾಲಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಬಳಿಕ ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಹಿಂದೆ ಹಲವು ಕಾರ್ಯಕ್ರಮದಲ್ಲಿ ತಾವು ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ ನಟ ಮಾತನಾಡಿದ್ದರು. ರೈಟ್ ರೈಟ್ ಅಂತಾ ಟಿಕೆಟ್ ಕೊಟ್ಟ ನೆನಪನ್ನ ತಲೈವಾ ಹಂಚಿಕೊಂಡಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]