ಭೋಪಾಲ್: 29 ಮರಿಗಳಿಗೆ ಜನ್ಮ ನೀಡಿದ್ದ ಕಾಲರ್ ವಾಲಿ ಮಾರತರಂ ಎಂದೂ ಪ್ರಸಿದ್ಧಿಯಾಗಿದ್ದ ಹುಲಿ ಶನಿವಾರ ವೃದ್ಧಾಪ್ಯದ ಕಾರಣ ಮೃತಪಟ್ಟಿದೆ. 16 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿದ್ದ ಹೆಣ್ಣುಹುಲಿ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶ(ಪಿಟಿಆರ್)ದಲ್ಲಿ ವಾಸವಿತ್ತು.
ಮಧ್ಯಪ್ರದೇಶದ ಸಚಿವ ಡಾ.ನರೋತ್ತಮ್ ಮಿಶ್ರಾ ಸೂಪರ್ ಮಾಮ್ ನಿಧನಕ್ಕೆ ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸೂಪರ್ ಮಾಮ್‌ಗೆ ಕೊನೆಯ ನಮಸ್ಕಾರ. 29 ಮರಿಗಳಿಗೆ ಜನ್ಮ ನೀಡಿದ ಪೆಂಚ್ ಟೈಗರ್ ರಿಸರ್ವ್ನ ಕಾಲರ್ ವಾಲಿ ಹುಲಿ ಸಾವಿನ ಸುದ್ದಿ ದುಃಖಕರವಾಗಿದೆ. ಈ ಸೂಪರ್ ಅಮ್ಮನ ಕೊಡುಗೆಯಿಂದಾಗಿ ಇಂದು ಮಧ್ಯಪ್ರದೇಶ ಹುಲಿಗಳ ರಾಜ್ಯ ಎಂದು ಗುರುತಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೃಗಾಲಯದ 80 ಸಿಬ್ಬಂದಿಗೆ ಕೊರೊನಾ – ZOO ಬಂದ್
Advertisement
‘सुपर मॉम’ को आखिरी सलाम।
29 शावकों को जन्म देने वाली पेंच टाइगर रिजर्व की ‘कॉलर वाली बाघिन’ की मृत्यु की खबर दुखद है।
मध्यप्रदेश को मिली टाइगर स्टेट की गौरवशाली पहचान पर कोई भी चर्चा इस सुपर मॉम के महत्वपूर्ण योगदान के बिना पूरी नहीं हो सकेगी। pic.twitter.com/m82OoUyVfw
— Dr Narottam Mishra (@drnarottammisra) January 16, 2022
Advertisement
ಅರಣ್ಯ ಇಲಾಖೆ ಈ ಸೂಪರ್ ಅಮ್ಮನಿಗೆ ಟಿ-15 ಎಂದು ಅಧಿಕೃತವಾದ ಹೆಸರು ನೀಡಿತ್ತು. ಆದರೂ ಸ್ಥಳೀಯರು ಅವಳನ್ನು ಪ್ರೀತಿಯಿಂದ ಕಾಲರ್ ವಾಲಿ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ಭಾರತದ ಹಿರಿಯ ಸೋಮಾರಿ ಕರಡಿ ಸಾವು