CricketLatestMain PostSports

ಆರ್‌ಸಿಬಿಗೆ ಸೇರಿಸಿಕೊಂಡಾಗಿನಿಂದ ಗೇಲ್ ನನ್ನ ಬೆಸ್ಟ್ ಫ್ರೆಂಡ್ ಎಂದು ಫೋಟೋ ಹಂಚಿಕೊಂಡ ವಿಜಯ್ ಮಲ್ಯ

ಲಂಡನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)  ತಂಡಕ್ಕೆ ಕ್ರಿಸ್ ಗೇಲ್‍ರನ್ನು ಸೇರಿಸಿಕೊಂಡಾಗಿನಿಂದ ನನಗೆ ಉತ್ತಮ ಸ್ನೇಹಿತ ಎಂದು ಬರೆದುಕೊಂಡು ಉದ್ಯಮಿ ವಿಜಯ್ ಮಲ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಗೇಲ್ ಕುರಿತಾಗಿ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿರುವ ಮಲ್ಯ, ನನ್ನ ಉತ್ತಮ ಸ್ನೇಹಿತ ಕ್ರಿಸ್ಟೋಫರ್ ಹೆನ್ರಿ ಗೇಲ್, ಯೂನಿವರ್ಸ್ ಬಾಸ್ ಅವರನ್ನು ಭೇಟಿಯಾಗಲು ಸಂತೋಷವಾಗುತ್ತದೆ. ನಾನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಾಗಿನಿಂದ ಗೇಲ್ ಮತ್ತು ನನ್ನ ನಡುವೆ ಉತ್ತಮ ಒಡನಾಟವಿದ್ದು, ಆತ ನಾ ಕಂಡ ಅತ್ಯುತ್ತಮ ಆಟಗಾರ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ

2011ರಲ್ಲಿ ಗೇಲ್‍ರನ್ನು ಆರ್‌ಸಿಬಿ ತಂಡ ಖರೀದಿಸಿತ್ತು. ಆ ಬಳಿಕ ಆರ್‌ಸಿಬಿ ತಂಡದಲ್ಲಿ ಮಿಂಚಿದ ಗೇಲ್‍ರನ್ನು 2018ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಖರೀದಿಸಿತು. 2022ರ ಐಪಿಎಲ್ ಮೆಗಾ ಹರಾಜಿನಿಂದ ಸ್ವತಃ ಗೇಲ್ ಹಿಂದೆ ಸರಿದು ಐಪಿಎಲ್‍ನಲ್ಲಿ ಆಡಿರಲಿಲ್ಲ. ಇದನ್ನೂ ಓದಿ: 2021-22ರ ಅವಧಿಯಲ್ಲಿ ಟೀಂ ಇಂಡಿಯಾಗೆ 6 ನಾಯಕರು

ಗೇಲ್ ಐಪಿಎಲ್‍ನಲ್ಲಿ ಒಟ್ಟು 142 ಪಂದ್ಯಗಳಿಂದ 4,965 ರನ್ ಚಚ್ಚಿದ್ದು, ಒಟ್ಟು 3 ಫ್ರಾಂಚೈಸ್‍ಗಳ ಪರ ಆಡಿದ್ದಾರೆ. ಐಪಿಎಲ್‍ನಲ್ಲಿ ಗೇಲ್ ಸಿಡಿಸಿರುವ 175 ರನ್ ವೈಯಕ್ತಿಕ ಹೆಚ್ಚಿನ ಗಳಿಕೆ ಯಾಗಿದೆ.

Live Tv

Leave a Reply

Your email address will not be published.

Back to top button