ಮೈಸೂರು: ಶನಿವಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು, ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ಎರಡು ಸಮೀಕ್ಷೆಗಳು ಕಾಂಗ್ರೆಸ್ ಮುನ್ನಡೆ ಅಂತಾ ತಿಳಿಸಿದ್ರೆ, ಇನ್ನೆರಡು ಬಿಜೆಪಿ ಜಯದ ಮೆಟ್ಟಿಲಿಗೆ ಸನೀಹದಲ್ಲಿವೆ ಅಂತಾ ತಿಳಿಸಿವೆ. ಇನ್ನೊಂದು ಸಮೀಕ್ಷೆ ಬಿಜೆಪಿ ಗೆಲ್ಲುವ ನಿಶ್ಚಿತ ಅಂತಾ ಹೇಳಿದೆ.
ಮತದಾನ ಮತ್ತು ಮತಗಟ್ಟೆ ಸಮೀಕ್ಷೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಸಿಎಂ ಮಾತನಾಡಿದ್ದಾರೆ. ನಾನು ಮೊದಲಿನಿಂದಲೂ ಅಂದ್ರೆ ಆರು ತಿಂಗಳ ಹಿಂದಿನಿಂದಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿಕೊಂಡು ಬಂದಿದ್ದೇನೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ ಬಳಿಕ ನನಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು ಗೊತ್ತಾಯಿತು. ಕಾಂಗ್ರೆಸ್ 120 ಸೀಟ್‍ಗಳಲ್ಲಿ ಗೆಲುವು ಸಾಧಿಸಲಿದೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಬಿಜೆಪಿಗೆ ಸ್ಪಷ್ಟ ಬಹುಮತ: ಟುಡೇಸ್ ಚಾಣಕ್ಯ ಸಮೀಕ್ಷೆ
Advertisement
Advertisement
ಪ್ರಧಾನಿ ಮೋದಿ ಅವರ ಭಾಷಣದಿಂದ ಕರ್ನಾಟಕದಲ್ಲಿ ಯಾವ ಅಲೆಯೂ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಅದೇನು ಬದಲಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಾಪಕವಾಗಿ ಪ್ರಚಾರ ಮಾಡಿದ್ದು ಮತ್ತು ನಾವು ಐದು ವರ್ಷ ಮಾಡಿರುವ ಕೆಲಸಗಳು ನಮಗೆ ಅನುಕೂಲವಾಗಿವೆ ಅಂದ್ರು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ: ಎರಡರಲ್ಲಿ ಕಾಂಗ್ರೆಸ್, ಎರಡಲ್ಲಿ ಬಿಜೆಪಿಗೆ ಮುನ್ನಡೆ
Advertisement
ಚುನಾವಣೆ ಫಲಿತಾಂಶ ಬರುವರೆಗೂ ಎರಡು ದಿನ ವಿಶ್ರಾಂತಿ ಮಾಡುತ್ತೇನೆ. ಮತದಾನ ಮುಗಿದಿದ್ದು, ಎಲ್ಲವನ್ನೂ ತಲೆಯಿಂದ ತೆಗೆದು ಹಾಕಿ ರೆಸ್ಟ್ ಮಾಡ್ತೀನಿ. ಚಾಮುಂಡೇಶ್ವರಿ ಮತ್ತು ಬದಾಮಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಗೆಲ್ಲುತ್ತೇನೆ. ಎಕ್ಸಿಟ್ ಪೋಲ್‍ಗಳು ಏನೇ ಬರಲಿ ಗೆಲುವು ನಮ್ಮದೇ, ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.