ಬೆಂಗಳೂರು: ಆರ್.ವಿ.ಕಾಲೇಜಿನ ವಿದ್ಯಾರ್ಥಿಗಳು ಏಷ್ಯಾ ಎಕೋ ಮ್ಯಾರಥಾನ್‍ಗಾಗಿ ಸೂಪರ್ ಕಾರನ್ನು ರೆಡಿ ಮಾಡಿದ್ದು, ಇದು 2 ಗಂಟೆ ಚಾರ್ಜ್ ಮಾಡಿದರೆ ಸಾಕು ಗಂಟೆಗೆ 38ರ ವೇಗದಲ್ಲಿ 55 ಕಿಲೋಮೀಟರ್ ಓಡುತ್ತದೆ.
ಬಳಿ ಬಣ್ಣದಲ್ಲಿ ಖದರ್ ತೋರಿಸುತ್ತಿರುವ ಈ ಕಾರಿನ ಹೆಸರು ಮ್ಯೊಲಿರ್. ಇದು ಆರ್.ವಿ. ಕಾಲೇಜಿನ ಪ್ರಾಜೆಕ್ಟ್ ಗರುಡ ತಂಡದ ಕನಸಾಗಿದೆ. ಈ ಕಾರನ್ನು ಮಲೇಷ್ಯಾದಲ್ಲಿ ಇದೇ ತಿಂಗಳು 28 ರಂದು ನಡೆಯುವ ಎಕೋ ಮ್ಯಾರಥಾನ್‍ಗೆ ತಯಾರಿಸಲಾಗಿದೆ.
Advertisement
Advertisement
ಈ ಕಾರು ಕೇವಲ 1.2 ಮೀಟರ್ ಎತ್ತರ, 1.5 ಮೀ ಅಗಲ ಇದೆ. ಅಷ್ಟೇ ಅಲ್ಲದೆ ಕೇವಲ 45 ಕೆ.ಜಿ ತೂಕವಿದೆ. ಈ ಕಾರಿನ ಬ್ಯಾಟರಿಯನ್ನ ಕೇವಲ 2 ಗಂಟೆ ಚಾರ್ಜ್ ಮಾಡಿದರೆ ಸಾಕು. ಗಂಟೆಗೆ 38ರ ವೇಗದಲ್ಲಿ 55 ಕಿಲೋಮೀಟರ್ ಓಡುತ್ತದೆ ಎಂದು ಕಾರು ತಯಾರಕ ಮೊಹಮ್ಮದ್ ಮೊಮಿನ್ ತಿಳಿಸಿದ್ದಾರೆ.
Advertisement
ಈ ಕಾರು ತಯಾರಿಸಲು 20 ವಿದ್ಯಾರ್ಥಿಗಳ ತಂಡ, ಹಗಲಿರುಳು ಶ್ರಮಿಸಿದೆ. ಸುಮಾರು ಐದು ಲಕ್ಷ ರೂಪಾಯಿ ವೆಚ್ಚ ತಗುಲಿದೆ. ಕಾರ್ಬನ್ ಫೈಬರ್ ಬಳಸಿ, ಕಾರಿನ ಟಾಪನ್ನು ಅಟ್ರಾಕ್ಟ್ ಮಾಡಲಾಗಿದೆ. ಇದರ ಮತ್ತೊಂದು ವಿಶೇಷವೆಂದರೆ ಇದರಲ್ಲಿ ಒಬ್ಬರೇ ಕುಳಿತು ಪ್ರಯಾಣಿಸಬಹುದು. ಜೊತೆಗೆ ಗೇರ್ ಪ್ರೆಸ್ ಮಾಡದೇ 200 ಮೀಟರ್ ವರೆಗೂ ಚಲಿಸಬಹುದಾಗಿದೆ ಎಂದು ವಿದ್ಯಾರ್ಥಿ ಬದ್ರಿನಾಥ್ ಹೇಳಿದ್ದಾರೆ.