Super Blue Moon: ನೀಲಿ ಚಂದಿರನನ್ನು ಕಣ್ತುಂಬಿಕೊಂಡ ಜನ

Public TV
2 Min Read
Super Moon 1

ಕೋಲ್ಕತ್ತಾ: ಬುಧವಾರ (ಇಂದು) ರಾತ್ರಿ ಶ್ರಾವಣ ಪೌರ್ಣಮಿ ಆಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಸೂಪರ್‌ ಬ್ಲೂ ಮೂನ್‌ (Super Blue Moon) ದರ್ಶನವಾಗಿದೆ. ಇತರೇ ದಿನಗಳಿಗಿಂತ ಚಂದ್ರ ದೊಡ್ಡದಾಗಿ ಕಾಣಿಸಿಕೊಂಡಿದ್ದು, ಈ ಕೌತುಕವನ್ನು ಜನರು ಕಣ್ತುಂಬಿಕೊಂಡಿದ್ದಾರೆ.

ಆಗಸ್ಟ್ 30 ರಂದು ಕಾಣಿಸಿಕೊಳ್ಳುವ ಸೂಪರ್ ಬ್ಲೂ ಮೂನ್ ಖಗೋಳ ಘಟನೆಯಾಗಿದ್ದು, ಇದು 10 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಬಾಹ್ಯಾಕಾಶದಲ್ಲಿ ಚಂದ್ರನೊಂದಿಗೆ ಸಂಭವಿಸುವ ಇದೇ ರೀತಿಯ ಖಗೋಳ ಘಟನೆಗಳನ್ನು ಬ್ಲೂ ಮೂನ್, ನ್ಯೂ ಮೂನ್, ಫುಲ್ ಮೂನ್, ಸೂಪರ್ ಮೂನ್ ಎಂದೂ ಕರೆಯಲಾಗುತ್ತದೆ.

ಅದೇ ರೀತಿ ಇಂದು ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾ, ಅಸ್ಸಾಂನ ಗುವಾಹಟಿ ಸೇರಿದಂತೆ ವಿವಿಧ ಕೆಲವು ರಾಜ್ಯಗಳಲ್ಲಿ ಸೂಪರ್‌ ಮೂನ್‌ ಕಾಣಿಸಿಕೊಂಡಿದೆ. ಕೆಲವೆಡೆ ಮಳೆ ಮೋಡದ ವಾತಾವರಣದಿಂದಾಗಿ ನಿರಾಸೆ ಮೂಡಿಸಿದೆ. ಇದನ್ನೂ ಓದಿ: 7,000 ರಾಖಿ ಕಟ್ಟಿಸಿಕೊಂಡು ವಿಶ್ವ ದಾಖಲೆ ಬರೆದ ಜನಪ್ರಿಯ ಆನ್‌ಲೈನ್ ಬೋಧಕ ಖಾನ್ ಸರ್

ಸೂಪರ್ ಬ್ಲೂ ಮೂನ್ (Blue Moon) ಸಾಮಾನ್ಯ ದಿನಗಳಿಗಿಂತ 14 ಪ್ರತಿಶತ ದೊಡ್ಡದಾಗಿ ಮತ್ತು 30 ಪ್ರತಿಶತ ಪ್ರಕಾಶಮಾನವಾಗಿ ಕಾಣುತ್ತದೆ. ಇಂದು ಯಾವುದೇ ಉಪಕರಣಗಳಿಲ್ಲದೇ ಸೂಪರ್ ಬ್ಲೂ ಮೂನ್ ಅನ್ನು ಸುಲಭವಾಗಿ ನೋಡಬಹುದು. ಚಂದ್ರನು ನೀಲಿ ಬಣ್ಣದಲ್ಲಿ ಕಾಣುವುದಿಲ್ಲ, ಅದು ಸ್ವಲ್ಪ ತಿಳಿ ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಕಾಣುತ್ತದೆ. ಸುತ್ತಲೂ ಸಾಕಷ್ಟು ಮಾಲಿನ್ಯವಿದ್ದಾಗ, ಇದರಿಂದಾಗಿ ಧೂಳಿನ ಕಣಗಳು ಗಾಳಿಯಲ್ಲಿ ಹರಡಿಕೊಂಡಿದ್ದರೆ ಮಾತ್ರ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ನಲ್ಲಿ ಚಂದ್ರನು ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದರಂತೆ ಅಲ್ಲಲ್ಲಿ ಚಂದಿರನ ಕೌತುಕದ ದರ್ಶನವಾಗಿದೆ.

ಏನಿದು ಬ್ಲೂ ಮೂನ್‌?
ಸಾಮಾನ್ಯವಾಗಿ ತಿಂಗಳಿಗೆ ಒಮ್ಮೆ ಹುಣ್ಣಿಮೆ ಬರುತ್ತದೆ. ಆದ್ರೆ ಬ್ಲೂ ಮೂನ್‌ ಕಾಣಿಸಿಕೊಂಡಾಗ ಎರಡು ಬಾರಿ ಹುಣ್ಣಿಮೆ ಇರುತ್ತದೆ. ಇದನ್ನೂ ಓದಿ: 2024ಕ್ಕೆ ಮತ್ತೆ ಬರ್ತೀನಿ – ಹವಾ ಎಬ್ಬಿಸಿದ ಮೋದಿ ಟರ್ಮಿನೇಟರ್‌ ಪೋಸ್ಟರ್‌

ನಾಸಾದ ಪ್ರಕಾರ, ಈ ವರ್ಷ ನಾಲ್ಕು ಬಾರಿ ಬ್ಲೂ ಮೂನ್‌ ಸಂಭವಿಸಲಿದೆ. ಈ ತಿಂಗಳು ಎರಡು ದಿನ ಚಂದ್ರನು ಪೂರ್ಣ ಆಕಾರದಲ್ಲಿ ಆಗಸದಲ್ಲಿ ಉದಯಿಸಲಿದ್ದಾನೆ. ಸಮಯ ಹಾಗೂ ದಿನಾಂಕದ ಆಧಾರದ ಮೇಲೆ ಈ ಬಾರಿ ಉದಯಿಸುವ ಬ್ಲೂ ಮೂನ್‌ ಅನ್ನು 2ನೇ ಬ್ಲೂ ಮೂನ್‌ ಎಂದು ಅಂದಾಜಿಸಲಾಗಿದೆ. ಚಂದ್ರನ ಹಂತಗಳು ಸರಾಸರಿ 29.5 ದಿನಗಳವರೆಗೆ ಇರುವುದರಿಂದ 12 ಚಂದ್ರನ ಚಕ್ರಗಳನ್ನು ನಿಜವಾಗಿಯೂ 354 ದಿನಗಳಲ್ಲಿ ಪೂರ್ಣಗೊಳಿಸಬಹುದು ಎಂದು ಊಹಿಸಲಾಗಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article