ಬೀಜಿಂಗ್: ಸಾಮಾನ್ಯವಾಗಿ ನಾಯಿ ಅಥವಾ ಬೆಕ್ಕುಗಳು ದಷ್ಟಪುಷ್ಟವಾಗಿ ಬೆಳೆದಿರೋದನ್ನ ನೋಡಿರ್ತೀವಿ. ಆದ್ರೆ ಸಿಂಹ ಅಥವಾ ಹುಲಿ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅವುಗಳ ಫಿಟ್ ಆದ ದೇಹರಚನೆ. ಆದ್ರೆ ಇದಕ್ಕೆ ಭಿನ್ನವಾಗಿರೋ ಚೀನಾದ ದಢೂತಿ ಹುಲಿಗಳ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಇಲ್ಲಿನ ಹರ್ಬಿನ್ ಪ್ರಾಂತ್ಯದ ಸೈಬೀರಿಯಾ ಟೈಗರ್ ಪಾರ್ಕ್‍ನಲ್ಲಿ ಈ ದಢೂತಿ ಹುಲಿಗಳ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಕಳೆದ ವಾರ ಚೀನಾದಲ್ಲಿ ಸ್ಪ್ರಿಂಗ್ ಫೆಸ್ಟಿವಲ್ ಆಚರಿಸಲಾಗಿದ್ದು, ಹಬ್ಬದ ಪ್ರಯುಕ್ತ ಚೀನಿಯರಂತೆ ಈ ಹುಲಿಗಳೂ ಕೂಡ ಸಿಕ್ಕಾಪಟ್ಟೆ ತಿಂದು ಹೀಗಾಗಿವೆ ಅಂತ ಕೆಲವರು ತಮಾಷೆ ಮಾಡಿದ್ದಾರೆ.
Advertisement
Advertisement
ಆದ್ರೆ ಇನ್ನೂ ಕೆಲವರು ದಢೂತಿ ಹುಲಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹರ್ಬಿನ್‍ನಲ್ಲಿ ಚಳಿಗಾಲದ ವೇಳೆ ಹವಾಮಾನ ಮೈನಸ್ 20 ರಿಂದ 30 ಡಿಗ್ರಿ ಸೆಲ್ಶಿಯಸ್‍ನಷ್ಟಿರುವ ಕಾರಣ ಹುಲಿಗಳು ಹೆಚ್ಚಿನ ಆಹಾರ ಸೇವನೆ ಮಾಡುತ್ತವೆ. ಬೇಸಿಗೆಯಲ್ಲಿ ಮತ್ತೆ ಈ ಹುಲಿಗಳು ತೆಳ್ಳಗಾಗುತ್ತವೆ. ಹೀಗಾಗಿ ಚಿಂತಿಸೋ ಅಗತ್ಯವಿಲ್ಲ ಅಂತ ಹೇಳಲಾಗಿದೆ.
Advertisement